ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ; ಅಕ್ರಮ ಪತ್ತೆಗೆ SIT ರಚಿಸುವಂತೆ MLC ಸಿ.ಟಿ ರವಿ ಆಗ್ರಹ

ಬೆಳಗಾವಿ,ಡಿಸೆಂಬರ್,8,2025 (www.justkannada.in): ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತಾಗುತ್ತಿದೆ.  ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಅಕ್ರಮ ಪತ್ತೆಗೆ ಎಸ್ ಐಟಿ ರಚಿಸುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದರು.

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಕುರಿತು ಇಂದು ವಿಧಾನಪರಿಷತ್ ಕಲಾಪದಲ್ಲಿ ಎಂಎಲ್ ಸಿ ಸಿ.ಟಿ ರವಿ ಪ್ರಸ್ತಾಪಿಸಿದರು. ಈ ವೇಳೆ ಉತ್ತರಿಸಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟವಾಗುತ್ತಿದೆ. ಅದನ್ನು ಪತ್ತೆ ಹಚ್ಚುವ ಕೆಲಸ  ಆಗುತ್ತಿದೆ ಎಂದರು.

ದುಬೈನಲ್ಲಿ 150 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಮಾರಾಟ ಆಗುತ್ತಿದೆ ಈ ಅಕ್ರಮ ಪತ್ತೆಗೆ ಎಸ್ ಐಟಿ ರಚಿಸಿ ಎಂದು ಸಿಟಿ ರವಿ ಒತ್ತಾಯಿಸಿದರು. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.  ಈ ಸಂದರ್ಭದ‍ಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ,  ಅಕ್ರಮವಾಗಿ ಅಕ್ಕಿಯನ್ನು ಸಾಗಾಣಿಕೆ ಮಾಡಿದವರು ಬಿಜೆಪಿಯವರು. ಎ1, ಎ2, ಎ3 ಎಲ್ಲರೂ ಬಿಜೆಪಿ ಮೆಂಬರ್ ಎಂದು ಟಾಂಗ್ ಕೊಟ್ಟರು. ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕಡತದಿಂದ ಪದ ತೆಗೆದು ಹಾಕುವಂತೆ ವಿಪಕ್ಷಗಳು ಒತ್ತಾಯಿಸಿದರು.

Key words: Annabhagya, rice, MLC, CT Ravi, SIT