ಮಕ್ಕಳ ನಗುಮುಖದ ಕಲಿಕೆಗಾಗಿ ಅನಿಮೇಶನ್ ತಂತ್ರಜ್ಞಾನ ಬಳಕೆಗೆ ವೈಭವ್ ಹೆಸರುವಾಸಿ- ಹಿರಿಯ ರಂಗನಿರ್ದೇಶಕ ಪ್ರಸನ್ನ

ಮೈಸೂರು,ಆಗಸ್ಟ್,16,2025 (www.justkannada.in): ಮಕ್ಕಳಲ್ಲಿ ನಗುಮುಖದ ಕಲಿಕೆಗಾಗಿ ಅನಿಮೇಶನ್ ತಂತ್ರಜ್ಞಾನ ಬಳಕೆ ಮಾಡುವಲ್ಲಿ ವೈಭವ್ ಕುಮಾರೇಶ್ ಹೆಸರುವಾಸಿಯಾಗಿದ್ದಾರೆ ಎಂದು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಹಿರಿಯ ರಂಗನಿರ್ದೇಶಕ  ಪ್ರಸನ್ನ ನುಡಿದರು.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಮೂರುದಿನಗಳ ಸ್ಟಾಪ್ ಮೋಷನ್ ಆನಿಮೇಶನ್ ರಾಷ್ಟ್ರೀಯ ಕಾರ್ಯಗಾರ ಆರಂಭವಾಗಿದ್ದು, ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಶಿಬಿರಾತ್ರಿಗಳನ್ನು ಉದ್ದೇಶಿಸಿ ಪ್ರಸನ್ನ ಅವರು ಮಾತನಾಡಿದರು.

ವೈಭವ್ ಕುಮಾರೇಶ್ ಅವರು ಅನಿಮೇಶನ್ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು ಎಲ್ಲರೂ ಅವರಿಂದ ಕಲಿಯಬೇಕು. ಕಲಿತದ್ದನ್ನು ಒಳಿತಿಗೆ ಬಳಕೆ ಮಾಡುವಂತೆ ಸಲಹೆ ನೀಡಿದರು.

ಹಿಂಸೆ, ಯುದ್ಧ, ಅಸಹನೆಗಳೇ ತಾಂಡವಾಡುತ್ತಿರುವ ಇಂದಿನ ಜಗತ್ತಿನಲ್ಲಿ ವೈಭವ್ ಅವರು ಅನಿಮೇಶನ್ ತಂತ್ರಜ್ಞಾನವನ್ನು ಮಕ್ಕಳ ಬಳಕೆಗಾಗಿ ಹಾಗೂ ಆ ಮೂಲಕ ನಗುಮುಖದ ಕಲಿಕೆಗಾಗಿ ಬಳಕೆ ಮಾಡಿ ಹೆಸರುವಾಸಿಯಾಗಿದ್ದಾರೆ. ಸ್ವತಂತ್ರದ ದಿನವೂ ಆದ ದಿನವನ್ನು ಸ್ಮರಿಸಿ ಸ್ವತಂತ್ರವೆಂದರೆ ಸ್ವೇಚ್ಛಾಚಾರವಲ್ಲ. ಸ್ವಾತಂತ್ರ ಸಿಕ್ಕಬೇಕೆಂದರೆ ಸದ್ಭಾವನೆ ಬೇಕು. ಸಾಂಸ್ಕೃತಿಕ ಕಾರ್ಯಕರ್ತರಾದ ನೀವು ಈ ದೇಶದ ನಾಗರೀಕರಿಗೆ ನಗು ಮೊಗದ ಸಭ್ಯತೆ ಕಲಿಸಿದಿರಿ ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಅನಿಮೇಶನ್ ರಾಷ್ಟ್ರೀಯ ಕಾರ್ಯಗಾರ ನಿರ್ದೇಶಕ ವೈಭವ್ ಕುಮಾರೇಶ್ ಹಾಗೂ ಮುಖ್ಯ ಅತಿಥಿಗಳಾದ ಹಿರಿಯ ರಂಗಕರ್ಮಿ ಜಯರಾಮ್ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Key words: Vaibhav, famous, animation technology, Indian educational theater organization