ಬೆಂಗಳೂರು,ಆಗಸ್ಟ್,28,2025 (www.justkannada.in): ಬಹುಕಾಲದ ಗೆಳೆಯ ರೋಷನ್ ಜೊತೆ ಖ್ಯಾತ ನಿರೂಪಕಿ ಅನುಶ್ರೀ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊಡಗು ಮೂಲದ ಉದ್ಯಮಿ ರೋಷನ್ ಜೊತೆಗೆ ನಿರೂಪಕಿ ಅನುಶ್ರೀ ಇಂದು ಸಪ್ತಪದಿ ತುಳಿದಿದ್ದಾರೆ. ಇಂದು ಬೆಳಿಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ, ರೋಷನ್ ವಿವಾಹ ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ನೆರವೇರಿದ್ದು, ಸಿನಿಮಾ ಕಲಾವಿದರು, ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಆಗಸ್ಟ್ 27ನಿನ್ನೆ ಗಣೇಶ ಹಬ್ಬದ ದಿನದಂದು ಅನುಶ್ರೀ ಅವರ ಅರಿಸಿಣ ಶಾಸ್ತ್ರ ಕಾರ್ಯಗಳು ನೆರವೇರಿದ್ದವು. ಇಂದು ವಿವಾಹ ನೆರವೇರಿದ್ದು, ಅನುಶ್ರೀ ಅವರು ಗೆಳೆಯ ರೋಷನ್ ಕೈ ಹಿಡಿದಿದ್ದಾರೆ. ಅನುಶ್ರೀ ಅವರು ಕಿರುತೆರೆ ಶೋಗಳಲ್ಲಿ, ಸಿನಿಮಾ ಈವೆಂಟ್ ಗಳ ಮೂಲಕ ಗಮನ ಸೆಳೆದಿದ್ದಾರೆ.
Key words: Bangalore, Famous ancho,r Anushree, marries, boyfriend