ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಕಾರಣ ಕೊಟ್ಟ ಆನಂದ್ ಸಿಂಗ್…

ಬೆಂಗಳೂರು,ಜು,1,2019(www.justkannada.in):  ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಾವು ರಾಜೀನಾಮೆ ನೀಡಲು ಕಾರಣವೇನೆಂಬುದರ ಬಗ್ಗೆ ತಿಳಿಸಿದ್ದಾರೆ.

ಜಿಂದಾಲ್ ವಿಚಾರವಾಗಿ ನಾನು ನನ್ನ ನಿಲುವು ತಿಳಿಸಿದೆ. ಜಿಂದಾಲ್ ಗೆ ಭೂಮಿ ಪರಭಾರೆ ಮಾಡಬೇಡಿ ಎಂದಿದ್ದೆ. ಬಳ್ಳಾರಿ ಜನತೆಗೆ ಆಗುವ ಅನ್ಯಾಯವನ್ನ ವಿರೋಧಿಸಿದೆ.  ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಪಡಿಸಿಲ್ಲ ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಇಂದು ರಾಜ್ಯಪಾಲರನ್ನ ಭೇಟಿಯಾದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶಾಸಕ ಆನಂದ್ ಸಿಂಗ್, ಇಂದು ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾನು ನನ್ನ ಜಿಲ್ಲೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ನನ್ನ ಜಿಲ್ಲೆಗೆ ಅನ್ಯಾಯವಾಗಲು ಬಿಡುವುದಿಲ್ಲ.  ಜಿಲ್ಲೆಗಾಗಿ ಪಕ್ಷಾತೀತರಾಗಿ ಹೋರಾಟ ಮಾಡ್ತೇವೆ ಎಂದು ತಿಳಿಸಿದರು.

Key words: Anand Singh- reason – his resignation – MLA.