ಸಲಾರ್ ಚಿತ್ರ ತಂಡ ಇದ್ದ ವ್ಯಾನ್-ಲಾರಿ ನಡುವೆ ಅಪಘಾತ

ಬೆಂಗಳೂರು, ಫೆಬ್ರವರಿ 03, 2021 (www.justkannada.in):

ಸಲಾರ್ ಚಿತ್ರ ತಂಡ ಇದ್ದ ವ್ಯಾನ್​ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ.

ಗೋದಾವರಿ ಖಾನಿಯಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ ಪ್ರಭಾಸ್-ಶ್ರುತಿ ಹಾಸನ್ ಜೊತೆ ಇರುವ ಪ್ರಮುಖ ಶೂಟಿಂಗ್ ನಡೆಯುತ್ತಿದೆ.

ಚಿತ್ರೀಕರಣ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಚಿತ್ರತಂಡದ ನಾಲ್ವರಿಗೆ ಸ್ವಲ್ಪ ಪ್ರಮಾಣದ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಲಾರ್​​ ಶೂಟಿಂಗ್​ ಸ್ಥಳವಾದ ರಾಮಗುಂಡಂ ತಲುಪುವ ಮುನ್ನ ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಪ್ರಭಾಸ್​ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.