ಅಕ್ಕಿ ವಿಚಾರದಲ್ಲಿ ದ್ವೇಷ ರಾಜಕಾರಣ ಬೇಡ ಎಂದು ಅಮಿತ್ ಶಾಗೆ ಹೇಳಿದ್ದೇನೆ-ಸಿಎಂ ಸಿದ್ಧರಾಮಯ್ಯ.

ನವದೆಹಲಿ,ಜೂನ್,22,2023(www.justkannada.in):  ಅಕ್ಕಿ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡೋದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಿಳಿಸಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿ ಅಕ್ಕಿಪೂರೈಕೆ ವಿಚಾರ ಕುರಿತು ಸಿಎಂ ಸಿದ್ಧರಾಮಯ್ಯ ಚರ್ಚಿಸಿದರು. ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಎಫ್ ಸಿಐನವರು ಮೊದಲು ಅಕ್ಕಿ ಕೊಡುವುದಾಗಿ ಹೇಳಿದ್ದರು. ನಂತರ ಅಕ್ಕಿ ಪೂರೈಕೆ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿದ್ದಾರೆ ಅನ್ನಿಸುತ್ತೆ. ದ್ವೇ ಷ ರಾಜಕಾರಣ ಮಾಡೋದು ಬೇಡ ಅಂತಾ ಅಮಿತ್ ಶಾಗೆ ವಿವರವಾಗಿ ಹೇಳಿದ್ದೇನೆ ಅಮಿತ್ ಶಾ ಕೂಡ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆ.  ಯಾವುದೇ ಸಮಸ್ಯೆ ಇಲ್ಲ. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಬಗ್ಗೆ ಚರ್ಚಿಸಿದ್ದೇನೆ.  ಕೆಲವು ಕಡೆ ಅಕ್ಕಿ ಸಿಗುತ್ತೆ ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words:  Amit Shah – politics – issue -rice – CM Siddaramaiah.