ಅಮಿತ್ ಶಾ – ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಗೆ ಕೊನೆಗೂ ಸಮಯ ಫಿಕ್ಸ್..

ನವದೆಹಲಿ,ಜ,31,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ನಿನ್ನೆಯೇ ದೆಹಲಿಗೆ ಹೋಗಿ ಕಾದು ಕುಳಿತಿರುವ ಸಿಎಂ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸಚಿವ ಅಮಿತ್ ಶಾರನ್ನ ಭೇಟಿಯಾಗಲು ಸಮಯ ನಿಗದಿಯಾಗಿದೆ.

ಸಂಜೆ 4 ಗಂಟೆಗೆ ಭೇಟಿಗೆ ಸಿಎಂ ಬಿಎಸ್ ಯಡಿಯೂರಪ್ಪಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಯ ನೀಡಿದ್ದಾರೆ.  ಸಂಸತ್ ಭವನದಲ್ಲಿ ಅಮಿತ್ ಶಾ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ  ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ನಿನ್ನೆ ರಾತ್ರಿ 10.30ಕ್ಕೆ ಸಮಯ ನಿಗದಿ ಮಾಡಿದ್ದ ಅಮಿತ್ ಶಾ ನಂತರ ಬೆಳಿಗ್ಗೆ ಭೇಟಿಗೆ ತಿಳಿಸಿದ್ದರು. ಇದಾದ ಬಳಿ ಬೆಳಿಗ್ಗೆಯಿಂದಲೂ ಸಿಎಂ ಬಿಎಸ್ ಯಡಿಯೂರಪ್ಪ ಅಮಿತ್ ಶಶಾ ಅವರ ಭೇಟಿಗೆ ಕಾದು ಕುಳಿತಿದ್ದರು.

Key words: Amit Shah – CM BS Yeddyurappa-meet- time- fix.