ಅಮೆರಿಕ –ಇರಾನ್ ನಡುವಿನ ಸಂಧಾನಸಭೆ ಮುಂದೂಡಿಕೆ

ಇಸ್ಲಾಮಾಬಾದ್,ಏಪ್ರಿಲ್,10,2026 (www.justkannada.in): 15 ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲ ಇಂದು ಅಥವಾ ನಾಳೆ ಅಮೆರಿಕ –ಇರಾನ್ ನಡುವೆ ನಡೆಯಬೇಕಿದ್ದ ಸಂಧಾನಸಭೆ ಮುಂದೂಡಿಕೆಯಾಗಿದೆ.

ಪಾಕಿಸ್ತಾನದಲ್ಲಿ ಇಂದು ಅಥವಾ ನಾಳೆ  ನಡೆಯಬೇಕಿದ್ದ ಸಂಧಾನ ಸಭೆ ಮುಂದೂಡಿಕೆಯಾಗಿದೆ.  ಇಸ್ಲಾಮಾಬಾದ್ ನಲ್ಲಿ  2 ದೇಶಗಳ ನಡುವೆ  ಸಂಧಾನ ಸಭೆ ನಿಗದಿಯಾಗಿತ್ತು.  ನಿಯೋಗಗಳು ಬಾರದ ಹಿನ್ನೆಲೆ ಶಾಂತಿ ಸಂಧಾನ ಸಭೆ ಮುಂದೂಡಿಕೆಯಾಗಿದೆ.

ಇನ್ನು ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ನಿಲ್ಲಿಸಬೇಕು.  ಅಲ್ಲಿವರೆಗೂ ಸಂಧಾನ ಸಭೆಯಲ್ಲಿ ಬಾಗಿಯಾಗಲ್ಲ ಎಂದು ಇರಾನ್ ತಿಳಿಸಿದೆ ಎನ್ನಲಾಗಿದೆ.

Key words:  Postponement, negotiations, between, America and Iran