ಫೋಟೋ ದುರ್ಬಳಕೆ ಆರೋಪ ಎಕ್ಸ್ ಭಾಯ್ ಫ್ರೆಂಡ್ ವಿರುದ್ಧ ಕೇಸ್ ದಾಖಲಿಸಿದ ಅಮಲಾಪೌಲ್

ಮುಂಬೈ, ನವೆಂಬರ್ 4 2020: ಇಂಟರ್‌ನೆಟ್‌ನಲ್ಲಿ ಅಮಲಾ ಪೌಲ್‌ ಫೋಟೋ ದುರ್ಬಳಕೆ ಸಂಬಂಧ ಮಾಜಿ ಬಾಯ್‌ ಫ್ರೆಂಡ್‌ ವಿರುದ್ಧ ಕೇಸ್ ದಾಖಲಾಗಿದೆ.

ತಮ್ಮ ಕೆಲವು ಫೋಟೋಗಳು ದುರ್ಬಳಕೆ ಆಗಿವೆ ಎಂದು ಅವರು ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಮಾಜಿ ಪ್ರಿಯತಮನ ವಿರುದ್ಧವೇ ಕೇಸ್‌ ಹಾಕಿದ್ದಾರೆ. ಕಳೆದ ವರ್ಷ ಅಮಲಾ ಪೌಲ್‌ ಮತ್ತು ಗಾಯಕ ಭವನಿಂದರ್ ಸಿಂಗ್ ವಿವಾಹ ಆಗಿದ್ದಾರೆ ಎನ್ನಲಾದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

ವೃತ್ತಿಪರ ಉದ್ದೇಶದಿಂದ ಮಾಡಿಸಿದ ಆ ಫೋಟೋಶೂಟ್‌ ಅನ್ನು ಭವನಿಂದರ್‌ ದುರ್ಬಳಕೆ ಮಾಡಿಕೊಂಡಿದ್ದಾರೆ. ತಪ್ಪಾದ ಕ್ಯಾಪ್ಷನ್‌ಗಳೊಂದಿಗೆ ಅವುಗಳನ್ನು ಪೋಸ್ಟ್‌ ಮಾಡಲಾಗಿದೆ ಎಂದು ಭವನಿಂದರ್ ವಿರುದ್ಧ ಚೆನ್ನೈ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.