ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಒಬ್ಬ ಆಕಾಂಕ್ಷಿ : ಶಾಸಕ ತನ್ವೀರ್ ಸೇಠ್

ಮೈಸೂರು,ನವೆಂಬರ್,01,2020(www.justkannada.in) : ಸಿಎಂ ಆಗೋಕೆ ಅಂಕಿ ಸಂಖ್ಯೆ ಮುಖ್ಯ. ಸಂಖ್ಯೆ ಇದ್ರೆ ನಾನೆ ಸಿಎಂ ಆಗಬಹುದು. ಯಾರು ಸಿಎಂ ಆಗ್ತಾರೆ ಅದು ಮುಖ್ಯವಲ್ಲ, ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿ ದುರಾಡಳಿತದಿಂದ‌ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.jk-logo-justkannada-logo

ಬಂದಾಗ ಅಂಕಿಸಖ್ಯೆ ಅನುಗುಣವಾಗಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ. ನಾನು ಸಿಎಂ ಆಗುವ ಅರ್ಹತೆ ಇಟ್ಟುಕೊಂಡಿದ್ದೇನೆ. ಜನರಿಂದ ಆಯ್ಕೆಯಾದವರು ಸಿಎಂ ಆಗುವ ಬಯಕೆ ಇಟ್ಟುಕೊಳ್ಳಬಾರದು ಅಂತ ಏನಿಲ್ಲ ಎಂದರು.

ಶಾಸಕ ಜಮೀರ್‌ಅಹ್ಮದ್‌ ಪಕ್ಷದ ಸಿದ್ದಾಂತ ಏನು ಅಂತ ಗೊತ್ತಿಲ್ಲ

ಮುಖ್ಯಮಂತ್ರಿಗಳು ಯಾರಾಗ್ತಾರೆ ಅನ್ನೋದನ್ನ ಕಾಲ ಬಂದಾಗ ತೀರ್ಮಾನ ಮಾಡೋಣ. ನನ್ನ ಆಸೆ ಇಲ್ಲಿ ಮುಖ್ಯ ಅಲ್ಲ, ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಶಾಸಕ ಜಮೀರ್‌ಅಹ್ಮದ್‌ ಪಕ್ಷದ ಸಿದ್ದಾಂತ ಏನು ಅಂತ ಗೊತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಅಂಕಿ ಅಂಶವೇ ನಡೆಯುತ್ತಿರೋದು‌ ಎಂದು ಹೇಳಿದರು.

ಹೆಣ್ಣು ಆದ್ರೆ ಏನ್ ಮಾಡೋಕೆ ಆಗುತ್ತೆ, ಸಾಯಿಸಿ ಬಿಡ್ತೀವಾ

am-one-aspirant-Chief Minister-position-MLA-Tanveer Seth

ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬ ಚರ್ಚೆ ಹಿನ್ನೆಲೆ. ಏನ್ ಪೋಷಕರು ಕೆಲವೊಮ್ಮೆ ಗಂಡು ಮಗು ಆಗಬೇಕು ಅಂತ ಆಸೆ ಇಟ್ಕೊಂಡಿರ್ತಾರೆ. ಹೆಣ್ಣು ಆದ್ರೆ ಏನ್ ಮಾಡೋಕೆ ಆಗುತ್ತೆ, ಸಾಯಿಸಿ ಬಿಡ್ತೀವಾ ಶಾಸಕ ತನ್ವೀರ್ ಟಾಂಗ್ ನೀಡಿದರು.

am-one-aspirant-Chief Minister-position-MLA-Tanveer Seth

 

key words :  am-one-aspirant-Chief Minister-position-MLA-Tanveer Seth