ದುಬೈನಲ್ಲೂ ಯುಪಿಐ ಬಳಕೆಗೆ ಅವಕಾಶ: ಒಡಂಬಡಿಕೆಗೆ ಸಹಿ

ಬೆಂಗಳೂರು, ಜುಲೈ 16, 2023 (www.justkannada.in): ದುಬೈನಲ್ಲೂ ಯುಪಿಐ ಬಳಸಬಹುದಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಹೌದು. ದೇಶೀಯ ಯುಪಿಐ ಪ್ರಪಂಚದಾದ್ಯಂತ ಹರಡುತ್ತಿದೆ. ಕಳೆದ 2 ದಿನಗಳಲ್ಲಿ, 2 ದೇಶಗಳಲ್ಲಿ ಯುಪಿಐ ಬಳಕೆಯ ಅನುಮೋದನೆಯೊಂದಿಗೆ ಉತ್ತಮ ಯಶಸ್ಸು ಕಂಡುಬಂದಿದೆ.

ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ದುಬೈನಲ್ಲಿ ಪಾವತಿಗಳ ಬಳಕೆಗಾಗಿ ಯುಪಿಐ ಅನ್ನು ದುಬೈನ ಡಿಜಿಟಲ್ ಪಾವತಿ ಮೋಡ್ ಐಪಿಪಿಯೊಂದಿಗೆ ಸಂಪರ್ಕಿಸಲು ಒಪ್ಪಿಕೊಂಡಿವೆ.

ಭಾರತೀಯ ರೂಪಾಯಿ ಮತ್ತು ಯುಎಇ ದಿರ್ಹಾಮ್ಗಳಲ್ಲಿ ಗಡಿಯಾಚೆಗಿನ ವಹಿವಾಟುಗಳನ್ನು ಉತ್ತೇಜಿಸಲು ಯುಎಇಯ ಕೇಂದ್ರ ಬ್ಯಾಂಕ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರ್ಬಿಐ ತಿಳಿಸಿದೆ.