ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಅವಕಾಶ ನೀಡಿ- ಜಿಲ್ಲಾಡಳಿತಕ್ಕೆ ಮನವಿ.

ಮೈಸೂರು,ಮೇ,29,2021(www.justkannada.in): ಕಠಿಣ ಲಾಕ್ ಡೌನ್ ನಡುವೆ  ಮೂಕ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.jk

ಕೆಎಂಪಿಕೆ ಟ್ರಸ್ಟ್ ವತಿಯಿಂದ ನಿರಂತರವಾಗಿ  ಮೂಕಪ್ರಾಣಿಪಕ್ಷಿಗಳು, ದನಗಳಿಗೆ ಬೀದಿನಾಯಿಗಳಿಗೆ ಮತ್ತು ಕೋತಿಗಳಿಗೆ ಪ್ರತಿನಿತ್ಯ ಆಹಾರ ನೀಡುತ್ತಾ  ಸೇವಾ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಪ್ರಾಣಿ ಪಕ್ಷಿಗಳಿಗೆ ಹಾಲು ,ಅನ್ನ ಮೊಸರು, ಮೊಟ್ಟೆ, ಬನ್ ಬಿಸ್ಕೆಟ್ ಮತ್ತು ಹಸಿಹುಲ್ಲು, ಬಾಳೆಹಣ್ಣನ್ನ ಕೆಎಂಪಿಕೆ ಟ್ರಸ್ಟ್ ನೀಡುತ್ತಾ ಬಂದಿದೆ.

ಹೀಗಾಗಿ ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30ನಿಮಿಷಗಳು ಪ್ರಾಣಿ ಪಕ್ಷಿಗಳಿಗೆ ಆಹಾರದ ನೀಡಲು ಸ್ವಯಂ ಸೇವಕರಿಗೆ ಅವಕಾಶ ನೀಡಿ.  ಜೊತೆಗೆ ಪಾಲಿಕೆ ವಲಯಮಟ್ಟದಲ್ಲಿ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರ ತಂಡ ರಚಿನೆ ಮಾಡುವಂತೆ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.

Key words: Allow -volunteers – feed – animals.-Appeal –mysore- District-administration