ಮುಡಾ ವತಿಯಿಂದ ಸಿಎ ನಿವೇಶನಗಳ  ಹಂಚಿಕೆ ಹಿನ್ನೆಲೆ: ಅರ್ಜಿಗಳನ್ನು ಪಡೆಯಲು ನಿಗಧಿಗೊಳಿಸಿದ್ದ ಅಂತಿಮ ದಿನಾಂಕ ವಿಸ್ತರಣೆ.

ಮೈಸೂರು,ಅಕ್ಟೋಬರ್,ಅಕ್ಟೋಬರ್,21,2021(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಿಎ ನಿವೇಶನಗಳ  ಹಂಚಿಕೆ ಹಿನ್ನೆಲೆ, ಅರ್ಜಿಗಳನ್ನು ಪಡೆಯಲು ನಿಗಧಿಗೊಳಿಸಿದ್ದ ಅಂತಿಮ ದಿನಾಂಕವನ್ನ ನವೆಂಬರ್ 6ರವರೆಗೂ ವಿಸ್ತರಣೆ ಮಾಡಲಾಗಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ವಿ ರಾಜೀವ್, ಸಿ ಎ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ ಅರ್ಜಿಗಳನ್ನು ಪಡೆಯಲು ನಿಗಧಿಗೊಳಿದ್ದ ದಿನ ಇಂದಿಗೆ ಅಂತ್ಯವಾಗಬೇಕಿತ್ತು. ಆದರೆ ಕಳೆದೊಂದು ತಿಂಗಳ ಅವಧಿಯಲ್ಲಿ ಸಾಲು ಸಾಲು ಹಬ್ಬಗಳ ಜೊತೆಗೆ ಹೆಚ್ಚು ಸರ್ಕಾರಿ ರಜೆಗಳು ಬಂದವು‌. ಹೀಗಾಗಿ ವಿವಿಧ ಸಂಘ ಸಂಸ್ಥೆಗಳು ಸಿಎ ನಿವೇಶನಕ್ಕಾಗಿ ಅರ್ಜಿಗಳನ್ನು ಪಡೆಯಲು ನವೆಂಬರ್ 6 ವರೆಗೂ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಪಡೆದಿರುವ ಅರ್ಜಿಗಳನ್ನು ಮುಡಾಗೆ ಸಲ್ಲಿಸಲು ಅಕ್ಟೋಬರ್ 30ರವೆಗೆ ಸಮಯ ನಿಗಧಿ ಪಡಿಸಲಾಗಿತ್ತು.

ಇದೀಗ ನವೆಂಬರ್ 30 ರವರೆಗೂ ಭರ್ತಿ ಮಾಡಿದ ಅರ್ಜಿಗಳನ್ನು ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕದೊಂದಿಗೆ ಸ್ವೀಕರಿಸಲಾಗುತ್ತದೆ. ಈ ಬಾರಿ ಒಂದೇ ಅರ್ಜಿಯಲ್ಲಿ ಮೂರು ಸಿಎ ನಿವೇಶನಗಳಿಗೆ ಆದ್ಯತೆ ಮೇರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ತಿಳಿಸಿದರು.

Key words: Allocation -Muda -CA Locations-Deadline -extension – apply –HV Rajeev