ಪೊಲೀಸರಿಂದ ಅನ್ಯಾಯ ಆರೋಪ: ಸಿಎಂ ಎದುರೇ ವೃದ್ಧ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ.

ಬೆಂಗಳೂರು,ಮಾರ್ಚ್,18,2022(www.justkannada.in) ಪೊಲೀಸರಿಂದ ನನಗೆ ಅನ್ಯಾಯವಾಗಿದೆ ಎಂದು ಸಿಎಂ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಇಂದು ನಡೆದಿದೆ.

ಆರ್.ಟಿ ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಸುಂಕದಕಟ್ಟೆ ನಿವಾಸಿ ವೃದ್ಧ ಚಂದ್ರಶೇಖರ್  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದು, ಸೈಟ್ ಮಾರಾಟದ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ವಿಷ ಸೇವನೆಗೆ ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ವೃದ್ಧ ಚಂದ್ರಶೇಖರ್ ಅವರನ್ನ ಪಕ್ಕಕ್ಕೆ ಕರೆದೊಯ್ದು ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಈ ಹಿಂದೆಯೂ ಸಿಎಂ ಎದರು ಚಂದ್ರಶೇಖರ್ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.

Key words: Allegations-tried – suicide