ಡ್ರಗ್ಸ್ ದಂಧೆಯಲ್ಲಿ ನಂಟು ಆರೋಪ: ದಿ. ಮುತ್ತಪ್ಪರೈ ಪುತ್ರ ರಿಕ್ಕಿ ರೈ ಸಿಸಿಬಿ ವಶಕ್ಕೆ..

ಬೆಂಗಳೂರು,ಅಕ್ಟೋಬರ್6,2020(www.justkannada.in):  ಡ್ರಗ್ಸ್ ಜಾಲದಲ್ಲಿ ನಂಟು ಆರೋಪದ ಮೇಲೆ ಮಾಜಿ ಡಾನ್ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿರೈರನ್ನ  ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.jk-logo-justkannada-logo

ದಿ. ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ  ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಮುತ್ತಪ್ಪ ರೈ ಅವರ ಮಗನ ನಿವಾಸದ ಮೇಲೆ ದಾಳಿ ನಡೆಸಿದ್ದರು. ಸದಾಶಿವನಗರ ಮತ್ತು ಬಿಡದಿಯ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸುತ್ತಿದ್ದು ಇದೀಗ ರಿಕ್ಕ ರೈ ಅವರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.Allegations – Drugs- Former Dan - Muthapparai's –son- Ricky Rai- arrested - CCB

ರಿಕ್ಕಿರೈ ವಿರುದ್ಧ ಡ್ರಗ್ಸ್ ಪೆಡ್ಲರ್ ಗಳಿಗೆ ಅಶ್ರಯ ನೀಡಿದ ಆರೋಪ ಕೇಳಿ ಬಂದಿದೆ. ರಿಕ್ಕಿ ವಿರುದ್ಧ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

 

Key words: Allegations – Drugs- Former Dan – Muthapparai’s –son- Ricky Rai- arrested – CCB