ಶಾಲೆಗಳೆಲ್ಲಾ ನಿಯಮ ಪಾಲಿಸಬೇಕು-  ಶಿಕ್ಷಣ ಸಚಿವ ಸುರೇಶ್ ಕುಮಾರ್…

kannada t-shirts

ಬೆಂಗಳೂರು,ಫೆಬ್ರವರಿ,22,2021(www.justkannada.in): ಶಾಲೆಗಳೆಲ್ಲಾ ನಿಯಮ ಪಾಲಿಸಬೇಕು. ಅಗ್ನಿ ನಂದಕ, ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲಿಸಬೇಕು. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಆರೋಗ್ಯದ ಗಮನಹರಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ನೆಲಮಂಗಲ ದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ರಾಜ್ಯಾದ್ಯಂತ ಇಂದಿನಿಂದ 6,7,8 ಶಾಲೆಗಳು ಆರಂಭವಾಗಿದೆ. ಬೆಂಗಳೂರು ನಗರದಲ್ಲಿ 8 ನೇ ತರಗತಿ ಮಾತ್ರ ಆರಂಭಿಕವಾಗಿದೆ. ಯಾವರೀತಿ ನಡೆಯುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಶಾಲೆಯ ಭೇಟಿ ನೀಡಿದ್ದೇನೆ. ಶಾಲೆಯಲ್ಲಿ ಉತ್ತಮ ಹಾಜರಾತಿ ಇದೆ. ಪಠ್ಯಕ್ರಮ ಕಡಿಮೆಗೊಳಿಸಲಾಗಿದೆ. ೬ ರಿಂದ ೧೦ ನೇ ತರಗತಿ ಶಾಲೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದರು.All schools- rule-follow - Education Minister -Suresh Kumar.

ನಾಳೆಯಿಂದ ಖಾಸಗಿ ಶಾಲೆಗಳ ಸಂಘ ಪ್ರತಿಭಟನೆ ನಡೆಯುತ್ತೆ. ಅವರದ್ದು ನಾಲ್ಕೈದು ಬೇಡಿಕೆ ಇದೆ. ಪೋಷಕರ ಪರಿಸ್ಥಿತಿ ಅರಿತು ಶೇಕಡಾ 30 ಪೀಸ್ ಕಡಿತ ಮಾಡಲಾಗಿತ್ತು. ಇದ್ದಕ್ಕೆ ಒಪ್ಪಿಗೆ ನೀಡದೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಸರ್ಕಾರ ಇದಕ್ಕೆ ಮಧ್ಯ ಪ್ರವೇಶ ಮಾಡಲು ಇಷ್ಟ ಇಲ್ಲ. ಪೋಷಕರು ಮತ್ತು ಶಾಲೆ ಸಮನ್ವಯತೆ ಸಾಧಿಸಬೇಕು . ಪೋಷಕರು ಮತ್ತು ಶಾಲೆ ಸಂಧಾನಕ್ಕೆ ಬರಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡಬೇಕು. ಶಾಲೆಗಳೆಲ್ಲಾ ನಿಯಮ ಪಾಲಿಸಬೇಕು. ಅಗ್ನಿ ನಂದಕ, ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲಿಸಬೇಕು. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಆರೋಗ್ಯದ ಗಮನಹರಿಸಬೇಕು ಎಂದರು.

Key words All schools- rule-follow – Education Minister -Suresh Kumar.

 

website developers in mysore