ಕೊರೋನಾ ವೈರಸ್ ವಿರುದ್ದ ಎಲ್ಲರೂ ಹೋರಾಡೋಣ-ಟ್ವಿಟ್ಟರ್ ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕರೆ…

ನವದೆಹಲಿ,ಮಾ,14,2020(www.justkannada.in): ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಆತಂಕ ದೇಶದಲ್ಲೂ ಮನೆ ಮಾಡಿದ್ದು ಈ ಹಿನ್ನೆಲೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದೇಶದ ಜನತೆಗೆ ಕರೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ,  ಕೊರೋನಾ ವಿರುದ್ದ ಎಲ್ಲರೂ ಹೋರಾಡೋಣಾ. ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಹೋರಾಡೋಣ. ಎಲ್ಲರೂ ಸುರಕ್ಷಿತವಾಗಿರಿ ಜಾಗರೂಕರಾಗಿರಿ. ಚಿಕಿತ್ಸೆಗಿಂತ  ಕೊರೋನಾ ತಡೆಗಟ್ಟುವಿಕೆ ಉತ್ತಮ ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ, ದೇಶದ ಜನತೆಗೆ ಸಂದೇಶ ನೀಡಿದ್ದಾರೆ.

Key words:  all fight -against – corona virus-Team India- Captain -Virat Kohli – Twitter.