ನಾವೆಲ್ಲರೂ ಕೂಡಿ ಮುನ್ನಡೆಯೋಣ, ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ : ಸಿಎಂ ಬಿ.ಎಸ್.ವೈ

ಬೆಂಗಳೂರು,ಏಪ್ರಿಲ್,06,2021(www.justkannada.in) : ಅಂದಿನಿಂದ ಇಂದಿನವರೆಗೆ ಪಕ್ಷವನ್ನು ಮುನ್ನಡೆಸಿದ ನಮ್ಮ ಎಲ್ಲ ನಾಯಕರ ಉದ್ದೇಶ, ಪರಿಕಲ್ಪನೆಗಳು ಹಾಗೂ ಬೆಂಬಲಿಸಿದ ಜನರ ನಿರೀಕ್ಷೆ, ವಿಶ್ವಾಸಗಳನ್ನು ಈಡೇರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡಿ ಮುನ್ನಡೆಯೋಣ, ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.All -Come-move-party-Further-strengthen-CM-B.S.Y.ಬಿಜೆಪಿಯ ಎಲ್ಲ ನಮ್ಮ ಕಾರ್ಯಕರ್ತರಿಗೆ ಪಕ್ಷದ ‘ಸ್ಥಾಪನಾ ದಿನ’ದ ಶುಭಾಶಯಗಳು. 1951ರಲ್ಲಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಸ್ಥಾಪಿಸಿದ ಜನಸಂಘದ ಗಟ್ಟಿ ಬೇರುಗಳೊಂದಿಗೆ, 1980ರ ಏಪ್ರಿಲ್ 6 ರಂದು, ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜನ್ಮತಾಳಿತು. ರಾಷ್ಟ್ರೀಯತೆಯೇ ನಮ್ಮ ಸಿದ್ದಾಂತ, ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ತಿಳಿಸಿದ್ದಾರೆ.All -Come-move-party-Further-strengthen-CM-B.S.Y.

key words : All -Come-move-party-Further-strengthen-CM-B.S.Y.