ಮದ್ಯ ಪ್ರೀಯರಿಗೆ ಮತ್ತೆ ಶಾಕ್ : ಬಿಯರ್ ಮೇಲಿನ ಸುಂಕ ಹೆಚ್ಚಿಸಿ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು,ಮೇ,1,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದರೂ ಸಹ ಇತ್ತ ಹಲವು ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಹಾಲು, ವಿದ್ಯುತ್, ಡೀಸೆಲ್ ಬೆಲೆ ಹೆಚ್ಚಿಸ್ದ ಸರ್ಕಾರ ಇದೀಗ ಮೂರನೇ ಬಾರಿಗೆ ಮದ್ಯದ ದರ ಏರಿಕೆಗೆ ಮುಂದಾಗಿದೆ.ಈ ಮೂಲಕ ಮಧ್ಯಪ್ರಿಯರಿಗೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ.

ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, 195% ನಿಂದ 205% ಗೆ ಸುಂಕ ಹೆಚ್ಚಿಸುವ ಬಗ್ಗೆ ಕರುಡು ಅಧಿಸೂಚನೆ ಪ್ರಕಟಿಸಲಾಗಿದೆ.

ಇನ್ನು ಈ ಕುರಿತು ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ. ಬ್ರಾಂಡಿ, ವಿಸ್ಕಿ, ರಂ ಜಿನ್ ಗಳ ದರವನ್ನು ಪ್ರತೀ ಕ್ವಾಟರ್ ಗೆ 10 ರೂ.ಇಂದ 15 ರೂಪಾಯಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಬಿಯರ್ ದರ 10 ರೂ. ಇಂದ 20 ರೂ ವರೆಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

Key words: alcohol, Rate, increase, congress, Govrnement