ಬೆಂಗಳೂರು, ಜನವರಿ,1,2026 (www.justkannada.in): ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಕಟ್ಟಡದ ಆವರಣದಲ್ಲಿ ಸ್ಥಾಪಿಸಲಾಗಿರುವ ಅಕ್ಕ ಕೆಫೆ ನಿರ್ವಹಣೆ ಮಾಡಲು ಜಿಲ್ಲೆಯ ಆಸಕ್ತ ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಗಳು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಸಂಜೀವಿನಿ ಶಾಖೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಸಂಜೀವಿನಿ ಒಕ್ಕೂಟಗಳಲ್ಲಿ ಲಭ್ಯವಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕಕ್ಕೆ ದಿನಾಂಕ 08.01.2026 ರ ಸಂಜೆ:5.30 ರೊಳಗೆ ಸಲ್ಲಿಸಬೇಕು. ದಿನಾಂಕ ಮುಗಿದ ನಂತರ ಸ್ವೀಕೃತವಾಗುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಜೀವಿನಿ ಜಿಲ್ಲಾ, ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳನ್ನು ಸಂಪರ್ಕಿಸಿ ಎಂದು ಜಿಪಂ ಸಿಇಒ ಡಾ.ಕೆ ಎನ್ ಅನುರಾಧ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಕ ಕೆಫೆ ನಿರ್ವಹಿಸಲು ಮಹಿಳಾ ಸ್ವಸಹಾಯ ಗುಂಪುಗಳ ಆಯ್ಕೆ ಮಾನದಂಡಗಳು ನಿಗದಿ ಪಡಿಸಿದ್ದು ಅಕ್ಕ ಕಥೆಯಲ್ಲಿ ತೊಡಗಿಸಿಕೊಳ್ಳುವವರು ಕಡ್ಡಾಯವಾಗಿ ಜಿಲ್ಲೆಯ ಎನ್.ಆರ್.ಎಲ್.ಎಂ ಸ್ವಸಹಾಯ ಗುಂಪಿನವರಾಗಿರಬೇಕು. ವಾಕ್ ಪರಿಣಿತಿಯಲ್ಲಿ ಆಸಕ್ತಿವುಳ್ಳವರಿಗೆ ಮೊದಲ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು/ಪ್ರದೇಶ ಮಟ್ಟದ ಒಕ್ಕೂಟಗಳಡಿ ಅರ್ಹ ಮತ್ತು ಬಂಡವಾಳವನ್ನು ಹೂಡುವ ಸ್ವಸಹಾಯ ಗುಂಪುಗಳಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಯಾವುದೇ ಒಕ್ಕೂಟ/ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರಬಾರದು. ಅಕ್ಕ ಕೆಫೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶ ಸುತ್ತೋಲೆಗಳನ್ನು ಪಾಲನೆ ಮಾಡಲು ಬದ್ಧರಾಗಿರಬೇಕು. ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. ಅಕ್ಕ ಕೆಫೆಯಲ್ಲಿ ತೊಡಗಿಸಿಕೊಳ್ಳುವ ಸ್ವಸಹಾಯ ಗುಂಪಿನಲ್ಲಿ ಕನಿಷ್ಠ 5 ರಿಂದ ಗರಿಷ್ಠ 10 ಮಹಿಳೆಯರಿರುವ ಸ್ವಸಹಾಯ ಗುಂಪನ್ನು ಆಯ್ಕೆ ಮಾಡಲಾಗುವುದು. ಅಕ್ಕ ಕೆಫೆ ಶ್ರೇಣಿಕರಣ ಪ್ರಕ್ರಿಯೆಗೆ ಬದ್ಧರಾಗಿರಬೇಕು.
ಅರ್ಜಿಯೊಂದಿಗೆ ಸ್ವಸಹಾಯ ಗುಂಪು ಮತ್ತು ಸದಸ್ಯರು ಎನ್.ಆರ್.ಎಲ್.ಎಂ ನ ಎಂಐಎಸ್ ನಲ್ಲಿ ದಾಖಲಾಗಿರುವ ಬಗ್ಗೆ ಎಂಐಎಸ್ ಕೋಡ್ ಮಾಹಿತಿ. ಪಾಕ ಪರಿಣಿತಿಯಲ್ಲಿ ತರಬೇತಿ ಪಡೆದ ಪ್ರಮಾಣ ಪತ್ರ. ದುಡಿಯುವ ಬಂಡವಾಳವನ್ನು ಸದಸ್ಯರು ಹೂಡುವ ಬಗ್ಗೆ, ದೃಢೀಕರಣ ಪತ್ರ. ಒಕ್ಕೂಟ/ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರದ ಬಗ್ಗೆ ದೃಢೀಕರಣ. ಅಕ್ಕ ಕೆಫೆಯ ನಿರ್ವಹಣೆಯನ್ನು ಗುಂಪಾಗಿ 5 ರಿಂದ 10 ಜನ ಮಹಿಳೆಯರು ನಿರ್ವಹಿಸುವ ಬಗ್ಗೆ ದೃಢೀಕರಣ. ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರುವ ಬಗ್ಗೆ ದೃಢೀಕರಣ. ಅಕ್ಕ ಕೆಫೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶ ಸುತ್ತೋಲೆಗಳನ್ನು ಪಾಲನೆ ಮಾಡಲು ಬದ್ಧರಾಗಿರುವ ಬಗ್ಗೆ ದೃಢೀಕರಣ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಜಿಪಂ ಸಿಇಒ ಡಾ.ಕೆ ಎನ್ ಅನುರಾಧ ತಿಳಿಸಿದ್ದಾರೆ.
Key words: akka café, Applications, invited, Bangalore







