ಬೆಂಗಳೂರು,ಏಪ್ರಿಲ್,4,2022(www.justkannada.in): ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ವಿವಾದದ ಬಳಿಕ ಇದೀಗ ಮಸೀದಿಗಳಲ್ಲಿ ಮೈಕ್ ನಿರ್ಬಂಧಕ್ಕೆ ಆಗ್ರಹ ಕೇಳಿ ಬಂದಿದ್ದು ಈ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ.
ಸರ್ಕಾರಕ್ಕೆ ಮಸೀದಿಗಳಲ್ಲಿ ಅಜಾನ್ ನಿಲ್ಲಿಸುವ ತಾಕತ್ತು ಇಲ್ಲ. ಅಜಾನ್ ನಿಲ್ಲಿಸದಿದ್ರೆ ದೇಗುಲಗಳಲ್ಲಿ ಸ್ಪೀಕರ್ ಹಾಕುತ್ತೇವೆ. ದೇವಸ್ಥಾನದಲ್ಲಿ ಪ್ರತಿದಿನ 5 ಗಂಟೆಗೆ ರಾಮನ ಭಜನೆ ಮಾಡುತ್ತೇವೆ. ಶಿವನಾಮ ಓಂಕಾರಗಳನ್ನ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಕ್ ಬ್ಯಾನ್ ಅಭಿಯಾನ ಬಹಳ ವರ್ಷದಿಂದ ನಡೆಯುತ್ತಿದೆ ಕೋರ್ಟ್ ಆರ್ಡರ್ ಇದ್ದರೂ ಮೈಕ್ ಕಿರಿಕಿರಿ ತಪ್ಪುತ್ತಿಲ್ಲ. ಎಷ್ಟು ದೂರು ನೀಡಿದ್ರೂ ನಮ್ಮ ಮಾತು ಕೇಳುತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
Key words: Ajman -Temples – Speaker -Rama Bhajan-Pramod Muthalik






