ಕೋಲ್ಕತ್ತಾ,ಜನವರಿ,28,2026 (www.justkannada.in): ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಪತನದಿಂದ ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಈ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ವಿಮಾನ ದುರಂತದ ಬಗ್ಗೆ ಸುಪ್ರಿಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಲಿ ದೇಶದಲ್ಲಿ ಜನರು ಹಾಗೂ ನಾಯಕರಿಗೆ ಯಾವುದೇ ಸುರಕ್ಷತೆ ಇಲ್ಲ, ನಾಯಕರಿಗೆ ಸುರಕ್ಷತೆ ಕುರಿತು ಯಾವುದೇ ಭರವಸೆ ಇಲ್ಲ.
ವಿಮಾನ ದುರಂತದಲ್ಲಿ ರಾಜಕೀಯ ಪಿತೂರಿ ನಿರಾಕರಿಸುವಂತಿಲ್ಲ. ವಿಮಾನ ದುರಂತದ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
Key words: Ajit Pawar, death, plane crash, Mamata Banerjee, demands, probe







