ಮೈಸೂರು,ನವೆಂಬರ್,7,2025 (www.justkannada.in): ಮೈಸೂರಿನ ಚಾಮರಾಜಪುರಂನಲ್ಲಿರುವ ಪ್ರತಿಷ್ಠಿತ ಏರ್ ಲೈನ್ಸ್ ಹೋಟೆಲ್ ನ 25ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಹೋಟೆಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಹರೀಶ್ ಗೌಡ ಟಿ ಎಸ್ ಶ್ರೀವತ್ಸ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹಿರಿಯ ವಕೀಲ ಎಚ್ ಎನ್ ವೆಂಕಟೇಶ್ ಭಾಗಿಯಾಗಿದ್ದರು.
ಇದೇ ವೇಳೆ ಹೆಗ್ಡೆ ಗ್ರೂಪ್ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ವೇಳೇ ಹರೀಶ್ ಕುಮಾರ್ ಹೆಗ್ಡೆ ಅವರಿಗೆ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಬೃಹತ್ ಗುಲಾಬಿ ಹಾರ ಹಾಕಿ ಮೈಸೂರು ಪೇಟ ಹಾರ ಹಾಕಿ ಕೇಕ್ ಕತ್ತರಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದರು. ಈ ವೇಳೆ ಹರೀಶ್ ಕುಮಾರ್ ಹೆಗ್ಡೆ ಅವರ ಪತ್ನಿ ಪುತ್ರರಾದ ಅಭಿಷೇಕ್ ಹೆಗ್ಡೆ ಅಭಿಜಿತ್ ಹೆಗ್ಡೆ ಸೊಸೆ ಮೊಮ್ಮಗ ಭಾಗಿಯಾಗಿದ್ದರು. ವಕೀಲರು ಉದ್ಯಮಿಗಳು ಹಿತೈಷಿಗಳು ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅವರಿಗೆ ಶುಭಕೋರಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಕೀಲರಿಗೆ ಸನ್ಮಾನ
ಹೆಗ್ಡೆ ಗ್ರೂಪ್ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅವರ ಹುಟ್ಟುಹಬ್ಬ ಹಾಗೂ ಏರ್ ಲೈನ್ಸ್ ಹೋಟೆಲ್ 25ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೈಸೂರಿನ ವಕೀಲರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಿಮ್ಮಯ್ಯ ಕುಮಾರ್ ದಾಸನಕೊಪ್ಪಲು ಹಾಗೂ ಕೆ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸರ್ಕಾರಿ ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಅವರಿಗೂ ಗೌರವಿಸಲಾಯಿತು. ಎಂ ಡಿ ಹರೀಶ್ ಕುಮಾರ್ ಹೆಗಡೆ ಶಾಸಕರಾದ ಕೆ ಹರೀಶ್ ಗೌಡ ಶ್ರೀವತ್ಸ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಹಿರಿಯ ವಕೀಲ ಎಚ್ ಎನ್ ವೆಂಕಟೇಶ್ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಬಿಜೆಪಿ ಮುಖಂಡ ಬಿ ಪಿ ಮಂಜುನಾಥ್ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಪುತ್ರ ಅಭಿಷೇಕ್ ಹೆಗ್ಡೆ ಸಹೋದರ ಎಂ ಡಿ ಶರತ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ ರಾಮಮೂರ್ತಿ ಮಾಜಿ ಕಾರ್ಯದರ್ಶಿ ಎಸ್ ಉಮೇಶ್ ನಿವೃತ್ತ ಪೊಲೀಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ಕಾವೇರಿ ಆಸ್ಪತ್ರೆ ಎಂಡಿ ಚಂದ್ರಶೇಖರ್ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಹಿರಿಯ ಪತ್ರಕರ್ತರಾದ ಎಂ ಬಿ ಮರಮಕಲ್ ಹಾಗೂ ವಕೀಲರು ಪೊಲೀಸ್ ಅಧಿಕಾರಿಗಳು ಉದ್ಯಮಿಗಳು ಸೇರಿ ನೂರಾರು ಜನ ಭಾಗಿಯಾಗಿದ್ದರು.
Key words: Airlines Hotel, celebrates, 25th anniversary,







