Thursday, September 17, 2026

BDA Apartments

242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ BDA JK_Adv BDA Adv
Home Crime 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

ಅಹಮದಾಬಾದ್ ,ಜೂನ್,12,2025 (www.justkannada.in):  ಗುಜರಾತ್ ನ ಅಹಮದಾಬಾದ್ ಏರ್ ಪೋರ್ಟ್ ನಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್​ ಆದ ಕೆಲವೇ ಸಮಯದಲ್ಲಿ ಪತನಗೊಂಡಿರುವ ಘಟನೆ ನಡೆದಿದೆ.

ಬೋಯಿಂಗ್ 787-8 ಡ್ರೀಮ್‌ ಲೈನರ್ ಹೆಸರಿನ ವಿಮಾನವು  ಪತನಗೊಂಡಿದ್ದು ಇಬ್ಬರು ಪೈಲೈಟ್   12 ಸಿಬ್ಬಂದಿ ಸೇರಿದಂತೆ 242 ಜನರನ್ನು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಪತನದ ಪ್ರದೇಶದದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ಏಳು ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎನ್ ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.  ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್​ ರೂಪಾನಿ ಇದ್ದರು ಎಂದು ಹೇಳಲಾಗುತ್ತಿದೆ.

ಟೇಕ್ ಆಫ್ ಆಗಿ 33 ನಿಮಿಷಕ್ಕೆ ಪತನದ ಬಗ್ಗೆ ಮಾಹಿತಿ ಲಭ್ಯವಾಗಿದೆ.  ವಿಮಾನ ಪತನ ಘಟನೆ ಕುರಿತು ಪ್ರಧಾನಿ ಮಂತ್ರಿ ಕಚೇರಿ ಮಾಹಿತಿ ಕೇಳಿದೆ.   ವಿಮಾನ ಪತನದ ಬೆನ್ನಲ್ಲೇ  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗುಜರಾತ್ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ.vtu

Key words: Air India, plane, crashes , 242 passengers