“ಸಂಕೇತ ಭಾಷೆ” ಕುರಿತು  ಪಠ್ಯಕ್ರಮ ಸಿದ್ಧಗೊಳಿಸುವ ಅವಶ್ಯಕತೆ ಇದೆ – ಆಯಿಷ್‌ ನಿರ್ದೇಶಕಿ ಡಾ.ಪುಷ್ಪಾವತಿ.

Dr. Pushpavathi, Director of the All India Speech and Hearing Institute, opined that there is a need to prepare a curriculum to make children aware of sign language at the school and college level. There are also job opportunities for those who have learned sign language. For example, in most places, including courts and police stations, those who have learned this sign language act as a voice for the helpless who have been subjected to injustice and violence. Therefore, Dr. Pushpavati opined that there are also job opportunities for those who have learned sign language.

vtu

ಮೈಸೂರು, ಸೆ.೨೩,೨೦೨೫: ಶಾಲಾ,ಕಾಲೇಜು ಹಂತದಲ್ಲಿಯೇ ಮಕ್ಕಳಿಗೆ ಸಂಕೇತ ಭಾಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ  ಪಠ್ಯಕ್ರಮ ಸಿದ್ಧಗೊಳಿಸುವ ಅವಶ್ಯಕತೆ ಇದೆ ಎಂದು ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅಭಿಪ್ರಾಯಪಟ್ಟರು.

ಇಂದು “ ವಿಶ್ವ ಸಂಕೇತ ಭಾಷಾ ದಿನ” ಈ ಹಿನ್ನೆಲೆಯಲ್ಲಿ ಆಯಿಷ್‌ ನಿರ್ದೇಶಕಿ ಡಾ.ಪುಷ್ಪಾವತಿ ಅವರನ್ನು “ಜಸ್ಟ್‌ ಕನ್ನಡ” ಮಾತನಾಡಿಸಿತು.

ಸಮಾಜದಲ್ಲಿ ವಾಕ್‌ -ಶ್ರವಣ ಸಮಸ್ಯೆ ಎದುರಿಸುತ್ತಿರುವವರಿಗೂ ಸಮಾನ ಅವಕಾಶಗಳು ಲಭಿಸುವಂತಾಗಬೇಕು. ಆದ್ದರಿಂದ ಸಂಕೇತಾ ಭಾಷೆಯನ್ನು ಹೆಚ್ಚು ಹೆಚ್ಚು ಕಲಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಈ ಭಾಷೆಯ ಬಗ್ಗೆ  ಅರಿವು ಮೂಡಿಸಬೇಕು. ಇದೊಂದು ಮೌನದ ಭಾಷೆಯಾಗಿದೆ ಎಂದರು.

ಐ.ಎಸ್.ಆರ್.ಸಿ ವೆಬ್‌ ಸೈಟ್‌ ನಲ್ಲಿ ಹುಡುಕಿದರೆ ಸಂಕೇತ ಭಾಷೆಯನ್ನು ಕಲಿಯುವ ಹಲವಾರು ಮಾರ್ಗಗಳು ಲಭಿಸುತ್ತವೆ.  ಡಿಪ್ಲಾಮೋ, ಶಾರ್ಟ್‌ ಟರ್ಮ್‌ ಪ್ರೋಗ್ರಾಂ ಸೇರಿದಂತೆ ಹಲವಾರು ವಿವಿಧ ತರಬೇತಿಗಳಿವೆ. ಆಸಕ್ತರು ಇದರ ಸಹಾಯದಿಂದ ಸಂಕೇತ ಭಾಷೆ ಕಲಿಯಬಹುದಾಗಿದೆ.

ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಯಲ್ಲಿ ಸಂಕೇತ ಭಾಷೆ ಶಿಕ್ಷಕರಿದ್ದು ಅವರು ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗೆ ಸಂಕೇತ ಭಾಷೆಯನ್ನು ಕಲಿಯಲು ಸಹಕರಿಸುತ್ತಾರೆ. ಜತೆಗೆ ಆಯಿಷ್‌ ನ ಬಹುತೇಕ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲಿ ಸಂಕೇತ ಭಾಷಾ ಮಧ್ಯವರ್ತಿಗಳಿರುತ್ತಾರೆ. ಆ ಮೂಲಕ ಶ್ರವಣ ಸಮಸ್ಯೆ ಇರುವವರಿಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆಯುವುದು ಸುಲಭವಾಗುತ್ತದೆ.

ಉದ್ಯೋಗವಕಾಶ:

ಸಂಕೇತ ಭಾಷೆ ಕಲಿತವರಿಗೆ ಉದ್ಯೋಗವಕಾಶಗಳು ಸಹ ಇವೆ. ಉದಾಹರಣೆಗೆ ಕೋರ್ಟ್‌, ಪೊಲೀಸ್‌ ಠಾಣೆ ಸೇರಿದಂತೆ ಬಹುತೇಕ ಕಡೆ ಅನ್ಯಾಯಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಅಸಹಾಯಕರ ಪರ ದನಿಯಾಗಿ ಈ ಸಂಕೇತ ಭಾಷೆ ಕಲಿತವರು ಕಾರ್ಯ ನಿರ್ಹಿಸುತ್ತಾರೆ. ಆದ್ದರಿಂದ ಸಂಕೇತ ಭಾಷೆ ಕಲಿತವರಿಗೆ ಉದ್ಯೋಗವಕಾಶಗಳು ಸಹ ಇವೆ ಎಂದು ಡಾ.ಪುಷ್ಪಾವತಿ ಅಭಿಪ್ರಾಯಪಟ್ಟರು.

ಹಿನ್ನೆಲೆ:

2017ರಲ್ಲಿ United Nations General Assembly ಈ ದಿನವನ್ನು ಘೋಷಿಸಿತು. ಪ್ರಥಮವಾಗಿ 2018ರಲ್ಲಿ ವಿಶ್ವಾದ್ಯಂತ ಆಚರಣೆ ನಡೆಯಿತು. ಸೆ. 23 ಅನ್ನೇ  ಆಯ್ಕೆ ಮಾಡುವುದಕ್ಕೆ ಕಾರಣ – World Federation of the Deaf (WFD) 1951ರಲ್ಲಿ ಇದೇ ದಿನ ಸ್ಥಾಪನೆಯಾಯಿತು.

ಶ್ರವಣದೋಷ ಹೊಂದಿರುವ ಜನರಿಗೆ ಸಂವಹನ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಹಕ್ಕುಗಳಲ್ಲಿ ಸಮಾನ ಅವಕಾಶ ಒದಗಿಸುವುದು ಇದರ ಉದ್ದೇಶ. ಸಂಕೇತ ಭಾಷೆಗಳ ಮಹತ್ವವನ್ನು ಪ್ರಚಾರ ಮಾಡಿ, ಅವನ್ನು ಸಾಂವಿಧಾನಿಕ ಹಕ್ಕಿನಂತೆ ಮಾನ್ಯಗೊಳಿಸಲು ಪ್ರೋತ್ಸಾಹಿಸುವುದು. “Leave no one behind” (ಯಾರನ್ನೂ ಹಿಂದೆ ಬಿಟ್ಟುಬಿಡಬೇಡಿ) ಎಂಬ ತತ್ವವನ್ನು ಜಾಗೃತಗೊಳಿಸುವುದು.

ಜಾಗತಿಕ ಅಂಕಿಅಂಶಗಳು:

ವಿಶ್ವದಲ್ಲಿ 70 ಮಿಲಿಯನ್‌ಗಿಂತ ಹೆಚ್ಚು ಜನರು ಕಿವಿಯ ಅಸಮರ್ಥತೆ ಹೊಂದಿದ್ದಾರೆ. ಇವರಲ್ಲಿ 80% ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಾರೆ. ವಿಶ್ವದಾದ್ಯಂತ 300ಕ್ಕೂ ಹೆಚ್ಚು ಸಂಕೇತ ಭಾಷೆಗಳು ಬಳಕೆಯಲ್ಲಿವೆ. ಭಾರತದಲ್ಲೂ ಲಕ್ಷಾಂತರ ಜನರು Indian Sign Language (ISL) ಬಳಸುತ್ತಾರೆ.

2020ರಲ್ಲಿ ಸರ್ಕಾರ Indian Sign Language Research and Training Centre (ISLRTC) ಮೂಲಕ ಸಂಕೇತ ಭಾಷೆಗಾಗಿ ನಿಘಂಟು ಹಾಗೂ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದೆ.

key words: curriculum, Sign Language, AIISH Director, Dr. Pushpavathi.

vtu

SUMMARY:

Need to prepare a curriculum on “Sign Language” – AISH Director Dr. Pushpavathi.

Dr. Pushpavathi, Director of the All India Speech and Hearing Institute, opined that there is a need to prepare a curriculum to make children aware of sign language at the school and college level.

Dr. Pushpavathi, AIISH Director

There are also job opportunities for those who have learned sign language. For example, in most places, including courts and police stations, those who have learned this sign language act as a voice for the helpless who have been subjected to injustice and violence. Therefore, Dr. Pushpavati opined that there are also job opportunities for those who have learned sign language.