ಸಿಬ್ಬಂದಿಗೆ ಕರೋನಾ ಪಾಸಿಟಿವ್ : ನಾಳೆಯಿಂದ 3 ದಿನ AIISH ಗೆ ರಜೆ ಘೋಷಣೆ.

 

ಮೈಸೂರು, ಜು.28, 2020 : (www.justkannada.in news) : ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಿಬ್ಬಂದಿಗೆ ಇಂದು ಕರೋನಾ ಪಾಸಿಟಿವ್ ಧೃಡಪಟ್ಟಿದೆ . ಈ ಹಿನ್ನೆಲೆಯಲ್ಲಿ ಜು.29 ರಿಂದ 31 ರ ವರೆಗೆ ಆಯಿಷ್ ಗೆ ರಜೆ ಘೋಷಿಸಲಾಗಿದೆ.

 AIISH-covid-positive-closed-Mysore

ಈ ಸಂಬಂಧ ಸಂಸ್ಥೆ ಮುಖ್ಯಸ್ಥರು ಸುತ್ತೊಲೆ ಹೊರಡಿಸಿದ್ದು, ಜು. 28 ರಂದು ಸಂಸ್ಥೆ ಸಿಬ್ಬಂದಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ನಾಳೆಯಿಂದ ಜು. 31 ರ ವರೆಗೆ ಸಂಸ್ಥೆಗೆ ರಜೆ ನೀಡಲಾಗಿದೆ.

ಸಂಸ್ಥೆಯ ಸಿಬ್ಬಂದಿಗಳು ಸರಕಾರದ ನಿಯಮದಂತೆ ಮುಂಜಾಗ್ರತೆ ವಹಿಸುವಂತೆ ಹೇಳಿರುವ ಸಂಸ್ಥೆ ಮುಖ್ಯಸ್ಥರು, ಸಿಬ್ಬಂದಿಗಳಿಗೇನಾದರು ರೋಗ ಲಕ್ಷಣದ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಸರಕಾರ ಆಪ್ತಮಿತ್ರ ದೂರವಾಣಿ ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಧೃಢಪಟ್ಟ ಸಲುವಾಗಿ ರಜೆ ಘೋಷಿಸಿರುವ ಆಯಿಷ್, ಆ. 3 ರಿಂದ ಮತ್ತೆ ಕಾರ್ಯರಂಭ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 AIISH-covid-positive-closed-Mysore

key words : AIISH-covid-positive-closed-Mysore