ಕೃಷಿ ಸಚಿವರಿಗೆ ಮುಂದೆ ಗ್ರಹಚಾರ ಕಾದಿದೆ- ಕುರುಬೂರು ಶಾಂತಕುಮಾರ್ ಎಚ್ಚರಿಕೆ…

ಮೈಸೂರು,ಜನವರಿ,28,2021(www.justkannada.in):  ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನ ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ.ಸಿ ಪಾಟೀಲ್ ಗೆ, ಕೃಷಿ ಸಚಿವರಿಗೆ ಮುಂದೆ ಗ್ರಹಚಾರ ಕಾದಿದೆ ಎಂದು ಹೇಳುವ ಮೂಲಕ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.jk

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿತ್ತು. ಈ ಕುರಿತು ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್ , ಅಲ್ಲಿ ಹೋರಾಟ ನಡೆಸುತ್ತಿರುವವರು ರೈತರಲ್ಲ. ಅದು  ಭಯೋತ್ಪಾದಕರ ಕೃತ್ಯ ಎಂಬ ಹೇಳಿಕೆ ನೀಡಿದ್ದರು. Agriculture Minister –B.C Patil-farmer leader- Kuruburu Shanthakumar- warns.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ರೈತಮುಖಂಡ ಕುರುಬೂರು ಶಾಂತ ಕುಮಾರ್, ಅವರು ಕೃಷಿ ಸಚಿವರಲ್ಲ ಅವರೊಬ್ಬ ಸಿನಮಾ ಸಚಿವರು. ಎಷ್ಟೇ ಆಗಲಿ ಅವರು ಸಿನಿಮಾ ಕ್ಷೇತ್ರದಿಂದ ಬಂದವರಲ್ಲವೇ. ಅದಕ್ಕಾಗಿ ರೈತ ಹೋರಾಟದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಒಂದು ಕಡೆ ಹೋಗಿ ಭತ್ತ ನಾಟಿ ಮಾಡಿ ಫೋಸ್ ಕೊಡ್ತಾರೆ. ಇನ್ನೊಂದ್ ಕಡೆ ಜೋಳದ ತೆನೆ ಹೊತ್ತು ನಿಜವಾದ ರೈತ ಎಂದು ಫೋಸ್ ಕೊಡ್ತಾರೆ. ಅವರು ಕೃಷಿ ಸಚಿವರಾಗಲು ನಾಲಯಕ್ ಎಂದು ವಾಗ್ದಾಳಿ ನಡೆಸಿದರು.

Key words: Agriculture Minister –B.C Patil-farmer leader- Kuruburu Shanthakumar- warns.