ಸೆಸ್ಕಾಂ ನಿರ್ಲಕ್ಷ್ಯ: ಕೃಷಿ ಪರಿಕರ,ಬೆಳೆ ಬೆಂಕಿಗಾಹುತಿ..!

ಮೈಸೂರು,ಮೇ,12,2025 (www.justkannada.in): ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೃಷಿ ಪರಿಕರ, ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರು ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದ್ದು ಇದಕ್ಕೆ ಸೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಜಮೀನಿನಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತುಕೊಂಡಿದೆ. ಬಿರುಗಾಳಿಗೆ ಸಾರ್ಟ್ ಸರ್ಕ್ಯೂಟ್‌ಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಪರಿಣಾಮ ಬೆಳೆ, ಕೃಷಿ ಪರಿಕರಗಳು ಬೆಂಕಿಗಾಹುತಿಯಾಗಿವೆ.

ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದ ರೈತ ರವಿ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ರೈತರಿಗೆ ಸೇರಿದ ಡ್ರಿಪ್ ಪೈಪ್ ಗಳು, ಡ್ರಮ್ ಗಳು, ಟೊಮೆಟೊ ಬೆಳೆ ಬೆಂಕಿಗಾಹುತಿಯಾಗಿವೆ.

ನಮ್ಮ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ವಿದ್ಯುತ್ ತಂತಿ ಸರಿಪಡಿಸುವಂತೆ ಚೆಸ್ಕಾಂ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳ ನಿರ್ಲಕ್ಷ್ಯದಿಂದ ಘಟನೆಗಳು ದಿನನಿತ್ಯ ನಡೆಯುತ್ತಲೇ ಇವೆ. ಈ ಸಂಬಂಧ ಕರೆ ಮಾಡಿದರೆ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ. ತುಂಡಾಗಿ ಬಿದ್ದ ತಿಂತಿಗಳನ್ನ ತುಳಿದರೆ ಏನು ಗತಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು  ಘಟನೆಯಿಂದ ಹಾನಿಯಾಗಿರುವುದಕ್ಕೆ ತಕ್ಷಣವೇ ಪರಿಹಾರ ನೀಡಬೇಕು. ಜೋತು ಬಿದ್ದಿರುವ ತಂತಿಗಳನ್ನ ಸರಿಪಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Key words: SESCOM, negligence, Agricultural, equipment, crops, burnt