ರಿಸಲ್ಟ್ ಬಳಿಕ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಕೈ ಹಾಕುವುದು ನಿಶ್ಚಿತ-ಸಚಿವ ಸತೀಶ್ ಜಾರಕಿಹೊಳಿ ಆರೋಪ….

ಬೆಳಗಾವಿ,ಮೇ,4,2019(www.justkannada.in):  ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಬಳಿಕ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಕೈ ಹಾಕುವುದು ನಿಶ್ಚಿತ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಬಿಜೆಪಿ 2014 ರಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟು ಸೀಟುಗಳನ್ನು ಈ ಬಾರಿ ಪಡೆದರೆ ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೈ ಹಾಕುವುದು ಖಂಡಿತ. ವಿಪಕ್ಷದಲ್ಲಿರುವ ಯಾರಿಗೂ ಸರ್ಕಾದ ಆಡಳಿತ ಇಷ್ಟ ಆಗುವುದಿಲ್ಲ.ಅದು ಸ್ವಾಭಾವಿಕ. ಹೊಸದೇನಿಲ್ಲ, 40 ವರ್ಷದಿಂದ ನೋಡಿದ್ದೀವಿ ಎಂದು ತಿಳಿಸಿದರು.

ಕೆಂಪುಗೂಟದಲ್ಲಿ ಓಡಾಡುವವರು ಮೇಙ23ರ ನಂತರ ಮಾಜಿಗಳಾಗುತ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ರಮೇಶಱ ಜಾರಕಿಹೊಳಿಗೆ ತಿರುಗೇಟು ನೀಡಿದ ಸಚಿವ ಸತೀಶ್ ಜಾರಕಿಹೊಳಿ,  ಕೆಂಪು ಗೂಟದ ಕಾರು  ನಿಷೇಧವಾಗಿದೆ. ಬ್ಯಾನ್‌ ಆಗಿರುವುದು ಅವನಿಗೆ ಗೊತ್ತೇ ಇಲ್ಲ. ರಮೇಶ್ ಗೆ ಏನು ಗೊತ್ತಿರುವುದಿಲ್ಲ. ಏನು ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

Key words: After –result- BJP – government – destabilize -certain -ministers -Satish Jarakkihuli.