ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ನಟಿ ಶ್ರುತಿ ಹರಿಹರನ್ ಚಿಕ್ಕ ಗ್ಯಾಪ್ ಬಳಿಕ ಮತ್ತೆ ಹಿರಿ ತೆರೆಗೆ ಬಂದಿದ್ದಾರೆ.
ಹೌದು. ಮದುವೆ ಬಳಿಕ ‘ಹೆಡ್ ಬುಷ್’ ಚಿತ್ರದಲ್ಲಿ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಡಾಲಿ ಧನಂಜಯ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಹೆಡ್ ಬುಷ್’ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ.
ಜತೆಗೆ ಮದುವೆಯು ತಮ್ಮ ವೃತ್ತಿಜೀವನದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ.
ಮಗು ಜನಿಸಿದ ಬಳಿಕ ಜೀವನದಲ್ಲಿ ಬದಲಾವಣೆ ಆಯ್ತು. ಸಿನಿಮಾ ಮಾಡುವಾಗ ನನ್ನ ಅರ್ಧ ಮನಸ್ಸು ಮಗು ಕಡೆಗೆ ಇರುತ್ತದೆ’ ಎಂದು ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ.







