ರಕ್ಷಿತ್ ಒಳ್ಳೇಯ ಹುಡುಗ ಎಂದ ರಶ್ಮಿಕಾ !

ಬೆಂಗಳೂರು, ಜನವರಿ 30, 2019 (www.justkannada.in): ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ರಕ್ಷಿತ್‌ ಬಗ್ಗೆ ಒಂದೇ ಸಾಲಿನಲ್ಲಿ ಉತ್ತರಿಸುವಂತೆ ಕೇಳಿದ ಪ್ರಶ್ನೆಗೆ, ‘ರಕ್ಷಿತ್‌ ಶೆಟ್ಟಿ ಒಳ್ಳೆಯ ಹುಡುಗ’ ಎಂದು ಕಣ್ಣರಳಿಸಿ ಹೇಳಿರುವುದು ಆಕೆಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ವಿಜಯ ದೇವರಕೊಂಡ ಜೊತೆಗೆ ನಟಿಸಿದ ‘ಗೀತ ಗೋವಿಂದ’ ಚಿತ್ರದ ಯಶಸ್ಸು ಆಕೆಗೆ ತೆಲುಗಿನಲ್ಲಿ ಭದ್ರ ನೆಲೆ ಒದಗಿಸಿತು. ಬಳಿಕ ಈ ಇಬ್ಬರು ಒಟ್ಟಾಗಿ ನಟಿಸಿದ ‘ಡಿಯರ್‌ ಕಾಮ್ರೇಡ್‌’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. ಆದರೂ, ಟಾಲಿವುಡ್‌ನಲ್ಲಿ ಆಕೆಯ ಯಶಸ್ಸಿನ ನಾಗಾಲೋಟ ನಿಂತಿಲ್ಲ.

ಇದೀಗ ರಕ್ಷಿತ್ ಕುರಿತ ಹೇಳಿಕೆ ನೀಡಿರುವ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.