Saturday, August 1, 2026

BDA Apartments

Home Front Page 2014ರ ನಂತರ ದೇಶದಲ್ಲಿ ಶೇ.75ರಷ್ಟು ಉಗ್ರ ಚಟುವಟಿಕೆ ಕಡಿಮೆಯಾಗಿದೆ –ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

2014ರ ನಂತರ ದೇಶದಲ್ಲಿ ಶೇ.75ರಷ್ಟು ಉಗ್ರ ಚಟುವಟಿಕೆ ಕಡಿಮೆಯಾಗಿದೆ –ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಧಾರವಾಡ,ಫೆಬ್ರವರಿ,14,2024(www.justkannada.in): 2014ರ ನಂತರ ದೇಶದಲ್ಲಿ ಶೇ.75ರಷ್ಟು ಉಗ್ರ ಚಟುವಟಿಕೆ ಕಡಿಮೆಯಾಗಿದೆ  ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪುಲ್ವಾಮಾದಲ್ಲಿ ಉಗ್ರರ ದಾಳಿ  ನಡೆದು 5 ವರ್ಷವಾಗಿದೆ. ಹುತಾತ್ಮ ಯೋಧರರಿಗೆ ಗೌರವ ಸಮರ್ಪಣೆ ಮಾಡಿದ್ದೇನೆ. 2014 ರ ನಂತರ  ದೇಶದಲ್ಲಿ ಶೇ. 75ರಷ್ಟು ಉಗ್ರ ಚಟುವಟಿಕೆಗಳು ಕಡಿಮೆಯಾಗಿದೆ.   ಮವೋವಾದಿ ನಕ್ಸಲರ ಕೃತ್ಯವೂ  ಶೇ.75 ರಷ್ಟು  ಕಡಿಮೆಯಾಗಿದೆ ಎಂದರು.

ಈಗ ದೇಶದಲ್ಲಿ ಭಯೋತ್ಪಾದಕತೆ ಕಡಿಮೆಯಾಗಿದೆ. ದೇಶದಲ್ಲಿ ಭಯೋತ್ಪಾದನೆ ನಿರ್ನಾಮ ಮಾಡಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಇದರ ಪರಿಣಾಮ ದೇಶ ಸುರಕ್ಷಿತವಾಗಿದೆ.  ದೇಶ ಸುರಕ್ಷಿತವಾಗಿದ್ದರೇ ಸಮೃದ್ಧಿಯಿಂದಿರುತ್ತದೆ ಎಂದರು.

Key words: After -2014- terrorist -activity – reduced – 75% – Union Minister -Prahlad Joshi.