ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಅಫ್ಘನ್ ಉದಾಹರಣೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಬೆಂಗಳೂರು,ಆಗಸ್ಟ್,20,2021(www.justkannada.in): ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಅಫ್ಘನ್ ಉದಾಹರಣೆ. ಯಾವುದೋ ಕಾಲದಲ್ಲಿ ನಡೆಯುತ್ತಿತ್ತು ಎಂದು ಕೇಳುತ್ತಿದ್ದವು. ಆದರೆ ಈಗ ನಾವು ಅದನ್ನ ನೋಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಫ್ಘನ್ ನಲ್ಲಿ ಸಿಲುಕಿರುವ ಭಾರತೀಯರನ್ನ ರಕ್ಷಿಸಲು ವಿದೇಶಾಂಗ ಸಚಿವಾಲಯ ಕೆಲಸ ಮಾಡುತ್ತಿದೆ.ಅಲ್ಲಿರುವ ಭಾರತೀಯರನ್ನ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತೆಂಗು ಅಭಿವೃದ್ಧಿ ಮಂಡಳಿಗೆ ರೈತನೇ ಅಧ್ಯಕ್ಷನಾಗಬೇಕು.

ಇನ್ನು ರಾಜ್ಯದಲ್ಲಿ ಹಲವರು ತೆಂಗು ಬೆಳೆಯುತ್ತಾರೆ. ತೆಂಗು ಅಭಿವೃದ್ಧಿ ಮಂಡಳಿಗೆ ಯಾರ್ಯಾರೋ ಅಧ್ಯಕ್ಷರಾಗುತ್ತಿದ್ದರು. ಈಗ ತೆಂಗು ಬೆಳೆಯುವ ರೈತರೇ ಅಧ್ಯಕ್ಷರಾಗಬೇಕು ಅಂತಹ  ಕಾನೂನುನ್ನ ತರುತ್ತಿದ್ದೇವೆ.  ಟ್ರ್ಯಾಕ್ಟರ್, ಟಿಲ್ಲರ್ ಗೆ ಎಂಆರ್ ಪಿ ಹಾಕಬೇಕು. ಇಲ್ಲದಿದ್ದರೇ ನೋಟಿಸ್ ಕೊಡಲಾಗುವುದು ಎಂದು ಹೇಳಿದರು.

Key words: Afghanistan – example – where- terrorism -Union Minister- Shobha Karandlaje.