ತಾಲಿಬಾನ್ ಗೆ ಅಫ್ಘನ್ ಸರ್ಕಾರ ಅಧಿಕೃತ ಶರಣಾಗತಿ.

ಕಾಬೂಲ್, ಆಗಸ್ಟ್,15,2021(www.justkannada.in): ಅಫ್ಗಾನಿಸ್ತಾನ ಸರ್ಕಾರ ತಾಲಿಬಾನ್​ ಉಗ್ರರಿಗೆ ಅಧಿಕೃತವಾಗಿ ಶರಣಾಗಿದ್ದು, ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

 ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅನ್ನ ತಾಲಿಬಾನ್ ಉಗ್ರರು ಸುತ್ತವರೆದಿದ್ದು, ಸುಮಾರು 40 ಲಕ್ಷ ಜನರು ವಾಸವಿರುವ ಕಾಬೂಲ್ ನಗರದಲ್ಲಿ ಉಗ್ರಗಾಮಿಗಳು ಹಾಗೂ ಸೇನಾಪಡೆಗಳ ಸಂಘರ್ಷ ನಡೆದರೆ ನಾಗರಿಕರ ಸಾವುನೋವಿನ ಸಂಖ್ಯೆ ಹೆಚ್ಚಾಗುತ್ತದೆ ಅಧ್ಯಕ್ಷ ಅಶ್ರಫ್ ಘನಿ ಶರಣಾಗತಿಯ ನಿರ್ಧಾರ ತೆಗೆದುಕೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನದ ಗೃಹಸಚಿವ ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ.

Key words: Afghan- government -official surrender – Taliban