ಸ್ವೀಡನ್‌ ಟು ಮೈಸೂರು : ಮೂಲ ಹುಡುಕುತ ಬಂದ ಯುವತಿ..!

adopted girl ̲ Mysore ̲  in search of̲  her family ̲ no trace ̲ anjali pawar ̲ pune 

 

ಮೈಸೂರು, ಫೆ.೧೫, ೨೦೨೪ : (justkannada ̤ in news ) ಸ್ವೀಡನ್‌ ದೇಶದ ಯುವತಿಯೊರ್ವಳು ಭಾರತದಲ್ಲಿನ ತನ್ನ ಮೂಲ ಹುಡುಕುತ್ತ ಮೈಸೂರಿಗೆ ಬಂದ ಘಟನೆ ನಡೆದಿದೆ.

ಎಂಟು ವರ್ಷವಿದ್ದಾಗ  ಭಾರತದಿಂದ ಸ್ವೀಡನ್‌ಗೆ ತೆರಳಿದ ಈ ಯುವತಿ ಇಂದು ಕರ್ನಾಟಕದಲ್ಲಿ ತನ್ನ ಕುಟುಂಬದ ಮೂಲವನ್ನು ಹುಡುಕಾಡುತ್ತಿದ್ದು,ಸಾರ್ವಜನಿಕರ ನೆರವಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ  ವಕೀಲೆ ಅಂಜಲಿ ಪವಾರ್ ಮಾತನಾಡಿ ಹೇಳಿದಿಷ್ಟು..

ಜಾಲಿ ಸ್ಯಾಂಡ್ ಬರ್ಗ್( ಮೂಲ ಹೆಸರು ಜಾನು) ಎಂಬ ಯುವತಿ  ಎಂಟು ವರ್ಷವಿದ್ದಾಗ ೧೯೮೯ರಲ್ಲಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ಎಂಬ ಸಂಸ್ಥೆ ಸೇರಿ, ಬಳಿಕ ಸ್ವೀಡನ್‌ನ  ಕುಟುಂಬವೊಂದು ಆಕೆಯನ್ನು  ದತ್ತು ಪಡೆದುಕೊಂಡಿದ್ದು, ಈಗ ಅಲ್ಲಿಯೇ ಬೆಳೆದು ದೊಡ್ಡವಳಾದ ಯುವತಿ ಈಗ ತನ್ನ ಮೂಲ ಕುಟುಂಬದ ಹುಡುಕಾಟದಲ್ಲಿದ್ದಾರೆ.

ಜಾಲಿ ಸ್ಯಾಂಡ್‌ಬರ್ಗ್‌ಗೆ ತಮ್ಮ ಮೂಲ ಹುಡುಕುವ ಹಂಬಲ ಹೆಚ್ಚಾಗಿ ಅಗೇನ್ಸ್ಟ್ ಚೈಲ್ಡ್ ಟ್ರಾಕಿಂಗ್ ಸಂಸ್ಥೆಯನ್ನು ೨೦೧೭ರಲ್ಲಿ ಸಂಪರ್ಕಿಸಿದ್ದರು. ನಂತರ ಅವರಿಂದ ಕೆಲವು ಮಾಹಿತಿ ಪಡೆದುಕೊಂಡ ತಂಡ ಮೂಲ ಹುಡುಕಲು ಹೊರಟ್ಟಿತು. ಅದರಂತೆ ಜಾಲಿ ಸ್ಯಾಂಡ್‌ಬರ್ಗ್ ಮೂಲತಃ ಮೈಸೂರು ಜಿಲ್ಲೆಯ ಯಾವುದೋ ಒಂದು ಕುಟುಂಬದಲ್ಲಿ ೧೯೮೫ರಲ್ಲಿ ಜನಿಸಿದ್ದು, ಬಳಿಕ, ತಾಯಿ ಮಂಡ್ಯ ಬಳಿಯ ಮದ್ದೂರಿನವರಾಗಿದ್ದು,  ಅವರು ಈ ಹಿಂದೆ ಮೈಸೂರಿನ ಓರ್ವರನ್ನು ವಿವಾಹವಾಗಿದ್ದರು. ತಮ್ಮ ತಂದೆಯೂ ನಿಧನರಾದ ನಂತರ ತಾಯಿ ಎರಡನೇ ಮದುವೆಯಾಗಿದ್ದು, ಈ ನಡುವೇ ತಾಯಿಯೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅದಕ್ಕೂ ಕಾರಣ ತಿಳಿದಿಲ್ಲ. ಆದರೆ, ಅವರ ಮರಣೋತ್ತರ ಪರೀಕ್ಷೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

ಹೀಗಾಗಿ ಸ್ಯಾಂಡ್‌ಬರ್ಗ್‌ನ ಅಜ್ಜಿ ಪರಿಚಿತರಾದ ಜಯಮ್ಮ ಎಂಬುವವರಿಗೆ ತನ್ನನ್ನು ನೀಡಿದರು.  ಆಕೆ  ಬೆಂಗಳೂರಿನ ಮೇರಿ ಕಾನ್ವೆಂಟ್‌ಗೆ ಕರೆತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ.

ಹೀಗೆ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ತನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ಸಂಸ್ಥೆಗೆ ನೀಡಿದ್ದರೆಂಬುದು ಪತ್ತೆಯಾಯಿತು. ಆದರೆ ಆಕೆಗೆ ತನ್ನನ್ನು ನೀಡಿದವರು ಯಾರು ಎಂಬುದನ್ನು ತಿಳಿಯಲು ಹೋದರೆ ಆಕೆ ಈ ಹಿಂದೆಯೇ ನಿಧನವಾಗಿದ್ದಾರೆ.

ಈಗ ಅವರ ಮೂಲವನ್ನು ಹಿಡಿದು ಹೊರಟಾಗ  ಯಾರೂ ಸಹಾ ಬದುಕಿಲ್ಲ. ಹೀಗಿದ್ದರೂ ತನಗೆ ಸಹೋದರರು, ಸಹೋದರಿಯರು ಇರಬಹುದಾಗಿದ್ದು, ಅವರ ಹುಡುಕಾಟದಲ್ಲಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ಯಾಂಡ್‌ಬರ್ಗ್ ಮತ್ತು ಅವರ ಪತಿ ಎಡಿನ್ ಉಪಸ್ಥಿತರಿದ್ದರು.

Key words : adopted girl ̲ Mysore ̲  in search of̲  her family ̲ no trace ̲ anjali pawar ̲ pune

An adopted girl reached Mysore in search of her family. But, no trace̤  Anjali Pawar from Pune.