ಕೊರೊನಾ ನಿಯಂತ್ರಣಕ್ಕೆ 4T ಸೂತ್ರ ಅಳವಡಿಸಿಕೊಳ್ಳಿ- ಆರು ರಾಜ್ಯಗಳ ಸಿಎಂಗಳಿಗೆ ಪ್ರಧಾನಿ ಮೋದಿ ಸಲಹೆ.  

ಬೆಂಗಳೂರು,ಜುಲೈ,16,2021(www.justkannada.in): ಕೊರೋನಾ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿ 6 ರಾಜ್ಯಗಳ ಸಿಎಂಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.jk

ಪ್ರಧಾನಿ ಮೋದಿ ಅವರ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಸಿಎಸ್ ರವಿಕುಮಾರ್ ಭಾಗಿಯಾಗಿದ್ದಾರೆ. ಕೇರಳ, ಮಹಾರಾಷ್ಟ್ರ,ತಮಿಳುನಾಡು, ಆಂಧ್ರ, ಒಡಿಶಾ ರಾಜ್ಯಗಳ ಸಿಎಂಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ನಿಯಂತ್ರಣಕ್ಕೆ 4T ಸೂತ್ರ ಅಳವಡಿಸಿಕೊಳ್ಳಿ, ಟೆಸ್ಟ್ಮ ಟ್ರೇಸಿಂಗ್, ಟ್ರೀಟ್ ಮೆಂಟ್, ಟೀಕಾ ಈ ಸೂತ್ರ ಅಳವಡಿಸಿಕೊಳ್ಳಿ, 6 ರಾಜ್ಯಗಳಲ್ಲಿ ಶೇ.80 ರಷ್ಟು ಕೊರೋನಾ ಪಾಸಿಟಿವ್ ಇದೆ.  ರಾಜ್ಯಗಳಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಹೆಚ್ಚಿಸಿ. 3ನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಿ ಎಂದು ಸೂಚನೆ ನೀಡಿದರು.

Key words: Adopt – 4T- formula – corona- control-PM Modi –advises- CMs -six states