ಮೈಸೂರಿನಲ್ಲಿ ಇಂದಿನಿಂದ ಮೂರು ದಿನ ಆದಿಯೋಗಿಯ ‘ರಥಯಾತ್ರೆ’

ಮೈಸೂರು,ಡಿಸೆಂಬರ್,31,2025 (www.justkannada.in): 2025–26 ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, 1,000ಕ್ಕೂ ಹೆಚ್ಚು  ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಇಂದು (ಬುಧವಾರ) ಮೈಸೂರಿಗೆ ಆಗಮಿಸಿದ್ದು, ಜನರಿಗೆ ಮತ್ತು ಭಕ್ತರಿಗೆ ಆದಿಯೋಗಿಯ ಅನುಗ್ರಹವನ್ನು ಅನುಭವಿಸಲು ಅವಕಾಶವನ್ನು ಒದಗಿಸಲಿದೆ.

ಆದಿಯೋಗಿ ರಥವು ಇಲವಾಲದಿಂದ (ವಿವೇಕಾನಂದ ಫಾರ್ಮ್ ಹಾಲ್) ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಬೆಳಿಗ್ಗೆ 8 ಗಂಟೆಗೆ ಮೈಸೂರಿಗೆ  ತಲುಪಿದ್ದು ಮೂರು ದಿನಗಳ ಕಾಲ ಆದಿಯೋಗಿಯ ಅನುಗ್ರಹ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.

ಯಾತ್ರೆಯ ಮಾರ್ಗ:

ಇಲವಾಲ (ವಿವೇಕಾನಂದ ಫಾರ್ಮ್ ಹಾಲ್) → ಹಿಂಕಲ್ → ಐಶ್ವರ್ಯ ಪೆಟ್ರೋಲ್ ಬಂಕ್ → ಎಸ್‌ಜೆಸಿಇ ಇಂಜಿನಿಯರಿಂಗ್ ಕಾಲೇಜು → ಕೃಷ್ಣಧಾಮ → ಸರಸ್ವತಿಪುರಂ → ವಿದ್ಯಾರಣ್ಯಪುರಂ → ಶ್ರೀ ಸುತ್ತೂರು ಮಠ.

ಮೆರವಣಿಗೆಯು ಜನವರಿ 1 ಮತ್ತು 2 ರಂದು ಮೈಸೂರಿನ ಹಲವಾರು ಪ್ರಮುಖ ಸ್ಥಳಗಳ ಮೂಲಕ ಮುಂದುವರಿಯಲಿದ್ದು, ಫೆಬ್ರವರಿ 13, 2026 ರಂದು ಮಹಾಶಿವರಾತ್ರಿಯ ಭವ್ಯ ಆಚರಣೆಗಳಿಗಿಂತ ಮುಂಚಿತವಾಗಿ, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿಯ ಬಳಿ ಸಮಾಪಣೆಗೊಳ್ಳಲಿದೆ.

Key words: Adiyogi, Rath Yatra, Mysore, three days