ಕಾಡಾನೆಯ ತುಳಿತಕ್ಕೆ ಆದಿವಾಸಿ ಯುವಕ ಬಲಿ…

ಮೈಸೂರು, ಅಕ್ಟೋಬರ್,21,2020(www.justkannada.in): ಕಾಡಾನೆಯ ತುಳಿತಕ್ಕೆ ಆದಿವಾಸಿ ಯುವಕ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ನಂಜನಗೂಡು ತಾಲ್ಲೂಕಿನ ವೆಂಕಟಗಿರಿ ಕಾಲೋನಿ ಮತ್ತು ಡೋರನಕಟ್ಟೆ ಕಾಲೋನಿಯ ಮಧ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ವೆಂಕಟಗಿರಿ ಆದಿವಾಸಿ ಕಾಲೋನಿಯ ಕೆಂಪ ಮತ್ತು ಚಿಕ್ಕಮ್ಮ ಎಂಬುವರ ಪುತ್ರ ಗಣೇಶ( ಹನ್ಸ್ ಗಣೇಶ್) (25)  ಮೃತಪಟ್ಟ ಯುವಕ.

ಮೃತ ಯುವಕ ಗಣೇಶ್ ಬಂಕಹಳ್ಳಿ ಗ್ರಾಮದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಈ ವೇಳೆ ಕಾಡಾನೆ ತುಳಿತಕ್ಕೆ ಗಣೇಶ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ರವಿಕುಮಾರ್ ಆರ್ ಎಫ್ ಒ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.Adivasi -youth –death- elephant-attack-mysore

ಇನ್ನು ಶವವನ್ನ ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Key words: Adivasi -youth –death- elephant-attack-mysore