ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ರೆಮಿಡಿಸಿವಿರ್ ಮಂಜೂರು- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ…

ಬೆಂಗಳೂರು,ಮೇ,24,2021(www.justkannada.in): ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  ಮೇ 23 ರಿಂದ ಮೇ 30 ರವರೆಗಿನ ಅವಧಿಗೆ  ಹೆಚ್ಚುವರಿಯಾಗಿ 22.17 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಘೋಷಿಸಿದ್ದಾರೆ.jk

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಈ ಮೊದಲು 76.70 ಲಕ್ಷ ಔಷಧಿಯ ಬಾಟಲಿಗಳನ್ನು ಮೇ 23 ರವರೆಗೆ ಎಲ್ಲಾ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಇದರಿಂದ ಇದುವರೆಗೆ ದೇಶಾದ್ಯಂತ ಒಟ್ಟು 98.87 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ಮಂಜೂರು ಮಾಡಿದಂತಾಗಿದೆ ಎಂದು ಮಾಹಿತಿ ನೀಡಿದ್ಧಾರೆ.

Key words: Additional -Remedicivir -granted – all State – Union Territories-Union minister -D.V. Sadananda Gowda.