ಮದುವೆ ಗಾಸಿಪ್’ಗಳಿಗೆ ತೆರೆ ಎಳೆದ ತ್ರಿಷಾ 

ಮುಂಬೈ, ಜುಲೈ 31, 2020 (www.justkannada.in): ನಟಿ ತ್ರಿಷಾ  ಮದುವೆ ಸಂಬಂಧಿತ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಸಿಂಬು ಹಾಗೂ ತಾವು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು, ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ, ಅದು ಬಿಟ್ಟು ಇನ್ನೇನಿಲ್ಲ ಎಂದಿದ್ದಾರೆ.

ನಟ ಸಿಂಬು ಜತೆ ತ್ರಿಷಾ  ಶೀಘ್ರದಲ್ಲೇ ಮದುವೆ ಅಗಲಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಹಾಗಾಗಿ ಸಿಂಬು ತ್ರಿಷಾ ಮದುವೆ ಆಗಬಹುದು ಎಂಬ ಸುದ್ದಿಗಳು ಹರಿದಾಡಿದ್ದವು.

ಇವರಿಬ್ಬರು ವಿನ್ನೈತಾಂಡಿ ವರುವಾಯ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಕೂಡ. ಆದರೀಗ ಎಲ್ಲ ಅಂತೆ ಕಂತೆಗಳಿಗೆ ತ್ರಿಷಾ ಉತ್ತರ ನೀಡಿದ್ದಾರೆ.