ಗಾಯಕಿಯಾದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ !

ಮುಂಬೈ, ಜುಲೈ 01, 2019 (www.justkannada.in): ನಟಿ ಪ್ರಿಯಾ ವಾರಿಯರ್‌ ಈಗ ಹಿನ್ನೆಲೆ ಗಾಯಕಿಯಾಗುತ್ತಿದ್ದಾರೆ!

ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಿಯಾ ಅವರು ಅಲ್ಲಿನ ವೇದಿಕೆಗಳಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದರು.

ಇದೀಗ ರಾಜೇಶ ವಿಜಯನ್‌- ನಿರಂಜ್‌ ಅವರ ‘ಫೈನಲ್ಸ್‌’ ಚಿತ್ರದ ಹಾಡುವೊಂದನ್ನು ಹಾಡಿದ್ದಾರೆ. ಈ ಹಾಡನ್ನು ‘ಜೀವಂಶಮಯ್‌’ ಖ್ಯಾತಿಯ ಕೈಲಾಸ್‌ ಮೆನನ್‌ ಅವರು ಸಂಯೋಜಿಸಿದ್ದು, ಹಾಡಿನ ಟೀಸರ್‌ ಈಚೆಗೆ ಬಿಡುಗಡೆಗೊಂಡಿದೆ.