ಮಜಾ ಟಾಕೀಸ್ ಓನರ್’ಗೆ ಹೊಸ ‘ಮಡದಿ’ !

ಬೆಂಗಳೂರು, ಆಗಸ್ಟ್ 26, 2020 (www.justkannada.in): ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ವಾರಾಂತ್ಯಕ್ಕೆ ಮತ್ತೆ ಆರಂಭವಾಗಲಿರುವ ಮಜಾ ಟಾಕೀಸ್ ನಲ್ಲಿ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಶ್ವೇತಾ ಚೆಂಗಪ್ಪ ಕೆಲಸವನ್ನು ಕಿರುತೆರೆಯ ಈ ಜನಪ್ರಿಯ ನಟಿ ಪಲ್ಲವಿ ಗೌಡ ನಿರ್ವಹಿಸಲಿದ್ದಾರೆ.

ಮಜಾ ಟಾಕೀಸ್ ನಲ್ಲಿ ಇದುವರೆಗಿನ ಸಂಚಿಕೆಯಲ್ಲಿ ನಟಿ ಶ್ವೇತಾ ಚಂಗಪ್ಪ ಸೃಜನ್ ಪತ್ನಿಯ ಪಾತ್ರ ಮಾಡಿದ್ದರು. ಆದರೆ ಈ ಬಾರಿಯ ಸೀಸನ್ ನಲ್ಲಿ ಸೃಜನ್ ಪತ್ನಿಯಾಗಿ ಎಲ್ಲರ ಕಾಳೆಯುತ್ತಿದ್ದ ಶ್ವೇತಾ ಬದಲಿಗೆ ಜೋಡಿ ಹಕ್ಕಿ, ಸೇವಂತಿ ಧಾರವಾಹಿ ಖ್ಯಾತಿಯ ಪಲ್ಲವಿ ಗೌಡ ಇರಲಿದ್ದಾರೆ.

ಶ್ವೇತಾ ಮಾಡುತ್ತಿದ್ದ ಪಾತ್ರವನ್ನು ಪಲ್ಲವಿ ಮಾಡಲಿದ್ದಾರೆ. ಈಗಾಗಲೇ ಪ್ರೋಮೋಗಳು ಕಲರ್ಸ್ ವಾಹಿನಿ ಹರಿದಾಡುತ್ತಿದೆ.