ನಟಿ ಹರ್ಷಿಕಾ ಪೂಣಚ್ಚ ಚಿತ್ರ ವೆಬ್ ಸಿರೀಸ್’ನತ್ತ

ಬೆಂಗಳೂರು, ಸೆಪ್ಟೆಂಬರ್ 20, 2022 (www.justkannada.in): ನಟಿ ಹರ್ಷಿಕಾ ಪೂಣಚ್ಚ ವೆಬ್ ಸಿರೀಸ್  ನತ್ತ ಕಾಲಿಟ್ಟಿದ್ದಾರೆ.

ಬೆಳ್ಳಿ ಪರದೆ ಮೇಲೆ ಮಿಂಚಿರುವ ಕೊಡಗಿನ ಹರ್ಷಿಕಾ ಪೂಣಚ್ಚ, ಈಗ ಹೊಸ ವೆಬ್​ ಸಿರೀಸ್ ಒಪ್ಪಿಕೊಡಿದ್ದಾರೆ.

ಅಂದಹಾಗೆ ಈ ಸರಣಿಯ ಚಿತ್ರೀಕರಣದಲ್ಲೂ ತೊಡಗಿದ್ದಾರೆ. ತಮ್ಮ ಪಾತ್ರದ ಒಂದು ಫೋಟೋವನ್ನ ಕೂಡ ಶೇರ್  ಮಾಡಿಕೊಂಡಿದ್ದಾರೆ.

ಕನ್ನಡದ ವೆಬ್ ಸಿರೀಸ್ ಒಪ್ಪಿಕೊಂಡಿರುವ ಹರ್ಷಿಕಾ ವೆಬ್ ಸಿರೀಸ್ ಆರಂಭಿಸೋಕು ಮುಂಚೇ, ಭೋಜಪುರಿ ಭಾಷೆಯ ಸಿನಿಮಾನೂ ಮಾಡಿದ್ದಾರೆ.

ಇನ್ನೂ ಹೆಸರಿಡದ ಈ ವೆಬ್ ಸಿರೀಸ್ ನಲ್ಲಿ ಒಂದ್ ಒಳ್ಳೆ ಕಥೆ ಇದೆ. ಇದು ನಾಲ್ಕು ಹುಡುಗಿಯರ ಜರ್ನಿ ಕಥೆ ಎನ್ನಲಾಗಿದೆ.