ಪೊಲೀಸರ ಬಲೆಗೆ ನಟಿ ಚಂದನಾ ಆತ್ಮಹತ್ಯೆ ಪ್ರಕರಣ ಆರೋಪಿ ದಿನೇಶ್

ಬೆಂಗಳೂರು, ಜೂ.7, 2020 (www.justkannada.in): ನಟಿ ಚಂದನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿನೇಶ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಮೇ 28ರಂದು ಸಹನಟಿ ಚಂದನಾ(29) ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆರೋಪಿ ದಿನೇಶ್​ನನ್ನು ಕಳೆದ 5 ವರ್ಷಗಳಿಂದ ಚಂದನಾ ಪ್ರೀತಿಸುತ್ತಿದ್ದರು.

ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಪಡೆದಿದ್ದ ಹಾಗೂ ದೈಹಿಕವಾಗಿ ಚಂದನಾರನ್ನು ಬಳಸಿಕೊಂಡಿದ್ದ ಎಂದು ದೂರು ನೀಡಲಾಗಿತ್ತು. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿಯಾಗಿದ್ದ ಚಂದನಾ ಮೇ 28ರಂದು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.