ಬಾಟಲ್ ಕ್ಯಾಪ್ ಚಾಲೆಂಜನ್ನು ವಿಶಿಷ್ಠವಾಗಿ ಸ್ವೀಕರಿಸಿದ ನಟ ಸೋನು ಸೂದ್

ಮುಂಬೈ: ಜುಲೈ-14: ಇತ್ತೀಚಿನ ದಿನಗಳಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸುವುದು ಸೆಲೆಬ್ರಿಟಿಗಳಲ್ಲಿ ಟ್ರೆಂಡ್ ಆಗಿದೆ. ಇದೀಗ ಬಹುಭಾಷಾ ನಟ ಸೋನು ಸೂದ್ ವಿಭಿನ್ನ ರೀತಿಯಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ, ವಿಡಿಯೋವೊಂದನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಕೆಳಮುಖವಾಗಿ ಹಿಡಿದ ಬಾಟಲ್​​ ಕ್ಯಾಪ್​​ನ್ನು ಜಿಮ್​​ ಮಾಡುವ ಮೂಲಕ ಕಿಕ್​​ ಮಾಡಿ ಓಪನ್​​​​ ಮಾಡಿದ್ದಾರೆ ಸೋನು ಸೂದ್. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಲ್ಲಿ ವೈರಲ್ ಆಗಿದ್ದು, ಸೋನು ಸೂಧ್ ವಿಶಿಷ್ಠ ಶೈಲಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟ ಹಾಗೂ ನಟಿಯರು ಬಾಟಲ್​​ ಕ್ಯಾಪ್​ ಚಾಲೆಂಜ್​​​​ ಮಾಡಿರುವ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಸೋನು ಸೂದ್​​​​​​ ಕೊಂಚ ವಿಭಿನ್ನ ರೀತಿಯಲ್ಲಿ ಈ ಚಾಲೆಂಜ್​​ ಸ್ವೀಕರಿಸಿ ಇನ್ ಸ್ಟಾ ಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಬಾಟಲ್ ಕ್ಯಾಪ್ ಚಾಲೆಂಜನ್ನು ವಿಶಿಷ್ಠವಾಗಿ ಸ್ವೀಕರಿಸಿದ ನಟ ಸೋನು ಸೂದ್

Actore,sonu sood,different bottle cap challange