ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ

ಬೆಂಗಳೂರು:ಜೂ-9:(www.justkannada.in) ಬಾಡಿಗೆ ಮನೆ ಡ್ಯಾಮೆಜ್ ಮಾಡಿದ್ದಾರೆ ಎಂದು ಆರೋಪಿಸಿ ನಟ ಯಶ್ ಹಾಗೂ ಅವರ ತಾಯಿ ಪುಷ್ಪ ಇನ್ನಿತರರ ವಿರುದ್ಧ ದೂರು ನೀಡಿರುವ ಮನೆ ಮಾಲೀಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಹೈಕೋರ್ಟ್ ಸೂಚನೆ ಮೇರೆಗೆ ಶುಕ್ರವಾರ ನಟ ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಮನೆಯಲ್ಲಿದ್ದ ಹಲವಾರು ವಸ್ತುಗಳಾದ ವಾರ್ಡ್ ರೋಬ್, ಕಿಚನ್, ಲೈಟಿಂಗ್ಸ್, ಸಿಂಕ್, ಕಮೋಡ್, ಬಾಗಿಲು ಸೇರಿದಂತೆ ಸುಮಾರು 21 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಯಶ್ ಕುಟುಂಬದ ವಿರುದ್ಧ ಗಿರಿನಗರಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ನಟ ಯಶ್ ಬಾಡಿಗೆ ಮನೆ ಡ್ಯಾಮೆಜ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಅವರ ತಾಯಿ ಪುಷ್ಪಾ ಹಾಗೂ ಇನ್ನಿತರರ ವಿರುದ್ಧ ದೂರು ಬಂದಿದೆ. ದೂರನ್ನು ಆದರಿಸಿ ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾ ಮಲೈ ಮಾಹಿತಿ ನೀಡಿದ್ದಾರೆ.

21ಲಕ್ಷ ಬೆಲೆಬಾಳುವ ವಸ್ತು ಹಾನಿ ಮಾಡಿದ್ದಾರೆ. ಅದೂ ಹೈಕೋರ್ಟ್ ಆದೇಶ ಇದ್ದರೂ ಮನೆಗೆ ಎಕಾಏಕಿ ನುಗ್ಗಿ ವಸ್ತುಗಳನ್ನು ಹಾನಿ ಮಾಡಲಾಗಿದೆ ಎಂದು ಮನೆ ಮಾಲೀಕರು ದೂರಿದದಗಿ ತಿಳಿಸಿದ್ದಾರೆ.

2 ತಿಂಗಳ ಹಿಂದೇಯೇ ಮನೆ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಹಾಸನದಲ್ಲಿ ಮನೆ ನಿರ್ವಿುಸುತ್ತಿರುವುದರಿಂದ ಕಾಲವಕಾಶಬೇಕು ಎಂದು ಯಶ್ ತಾಯಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮೇ 31ರ ವರೆಗೆ ಹೈ ಕೋರ್ಟ್ ಕಾಲವಕಾಶ ನೀಡಿತ್ತು. ಆದರೆ, ಯಶ್ ಕುಟುಂಬ ಜೂ.7ರಂದು ಮನೆ ಖಾಲಿ ಮಾಡಿತ್ತು.

ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ

Actor Yash,Homeowner,complaint,decide to legal battle,