ಕುತೂಹಲವಾಗಿಯೇ ಉಳಿದ ಯಶ್ ಮುಂದಿನ ಸಿನಿಮಾ…

ಬೆಂಗಳೂರು, ಸೆಪ್ಟೆಂಬರ್ 07, 2021 (www.justkannada.in): ನಟ ಯಶ್ ಕೆಜಿಎಫ್ 2 ರಿಲೀಸ್ ಬಳಿಕವೇ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಹೌದು. ಕೆಜಿಎಫ್ 2 ರಿಲೀಸ್ ದಿನಾಂಕ 2022ಕ್ಕೆ ಮುಂದೂಡಿಕೆಯಾಗಿದೆ. ಈ ನಡುವೆ ನೆಚ್ಚಿನ ನಟನ ಮುಂದಿನ ಚಿತ್ರಕ್ಕೆಕಾದು ಕುಳಿತಿರುವ ಅಭಿಮಾನಿಗಳಿಗೆ ಯಶ್ ಮುಂದಿನ ಚಿತ್ರದ ಕುರಿತು ಯಾವುದೇ ಮಾಹಿತಿ ಇಲ್ಲ.

ಮೂಲಗಳ ಪ್ರಕಾರ ಯಶ್ ಕೆಜಿಎಫ್ 2 ರಿಲೀಸ್ ಬಳಿಕವೇ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಮುಫ್ತಿ ಡೈರೆಕ್ಟರ್ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಸಿನಿಮಾ ಎಂಬ ಸುದ್ದಿಯಿತ್ತು. ಆದರೆ ಇದುವರೆಗೆ ಅನೌನ್ಸ್ ಆಗಿಲ್ಲ. ಹೀಗಾಗಿ ಯಶ್ ಮುಂದಿನ ಸಿನಿಮಾ ಯಾವುದು ಎಂಬುದು ಕುತೂಹಲವಾಗಿಯೇ ಉಳಿದಿದೆ.

 

key words: actor Yash not yet announced his next movie