ಪತ್ನಿ, ಮಗ, ಮಗಳ ಫೋಟೋ ಶೇರ್ ಮಾಡಿದ ಯಶ್ !

ಬೆಂಗಳೂರು, ಜನವರಿ 02, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಪೂರ್ಣ ಕುಟುಂಬದ ಫೋಟೋ ಶೇರ್ ಮಾಡಿದ್ದಾರೆ.

ಯಶ್ ಮಗಳು ಐರಾ ಯಶ್ ಫೋಟೋಗಳಂತೂ ಈಗಾಗಲೇ ಅಭಿಮಾನಿಗಳ ಮನ ಕದ್ದಿದೆ. ಮಗಳ ಫೋಟೋ ನೋಡಿರುವ ಜನ ಮಗನ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಕೇಳುತ್ತಲೇ ಇದ್ದರು.

ಇದೀಗ ರಾಕಿಂಗ್ ಫ್ಯಾಮಿಲಿಯ ಫುಲ್ ಕುಟುಂಬ ಬಹಿರಂಗವಾಗಿದೆ. ಅಂದರೆ ಯಶ್ ಮತ್ತು ರಾಧಿಕಾ ತಮ್ಮ ಮಗಳು ಮತ್ತು ಮಗನ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಶ್ ಮಗಳು ಐರಾಳನ್ನು ಎತ್ತಿಕೊಂಡಿದ್ದರೆ, ರಾಧಿಕಾ ಮಗನನ್ನು ಎತ್ತಿಕೊಂಡಿರುವ ಮುದ್ದಾದ ಫ್ಯಾಮಿಲಿ ಫೋಟೋ ಹಾಕಲಾಗಿದೆ.