ಬಿಗ್ ಬಾಸ್ ಸೀಸನ್ -9 ಕುರಿತು ಕಿಚ್ಚ ಸುದೀಪ್ ಮಾತು…

ಬೆಂಗಳೂರು, ಡಿಸೆಂಬರ್ 14, 2021 (www.justkannada.in): ಅಂದುಕೊಂಡತೆ ಯಾವುದೇ ಅಡೆತಡೆ ಇಲ್ಲದಿದ್ದರೆ ಬಹುಶಃ 2021 ರ ಜನವರಿಯಿಂದ ಕನ್ನಡದ ಬಿಗ್ ಬಾಸ್ ಸೀಸನ್ 9 ಆರಂಭವಾಗಬಹುದು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಕಿಚ್ಚ, ಕೊರೋನಾ ಮೂರನೇ ಅಲೆ ಭೀತಿ ಎದುರಾಗಿದೆ. ಇದು ಸರಿಯಾಗಿ ಎಲ್ಲವೂ ಅಂದುಕೊಂಡತೆ ಬಿಗ್ ಬಾಸ್ ಸೀಸನ್ 9 ಆರಂಭವಾಗಬಹುದು ಎಂದಿದ್ದಾರೆ.

ಈಗಾಗಲೇ ಕಿರುತೆರೆ ಲೋಕದ ಪ್ರಮುಖ ಸೆಲಿಬ್ರಿಟಿಗಳನ್ನು ಕಾರ್ಯಕ್ರಮ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ವದಂತಿಗಳ ಕುರಿತೂ ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಾರಿಯ ಬಿಗ್​ಬಾಸ್​ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಮಾಹಿತಿ ಸಿಗಲಿದೆ ಎಂದು ಸುದೀಪ್ ತಿಳಿಸಿದ್ದಾರೆ.
ಈ ಮೂಲಕ ಬಿಗ್ ಬಾಸ್ ಸೀಸನ್ ಒಂಭತ್ತರ ಆರಂಭದ ಸುದೀಪ್ ಸುಳಿವು ನೀಡಿದ್ದಾರೆ.