Thursday, September 17, 2026

BDA Apartments

ಕನ್ನಡ ಪರ ಹೋರಾಟಗಾರರಿಗೆ ‘ಮಂಕುತಿಮ್ಮನ ಕಗ್ಗ’ ಕೊಡುಗೆಯಾಗಿ ನೀಡಿದ ಕಿಚ್ಚ BDA ...
Home Cinema ಕನ್ನಡ ಪರ ಹೋರಾಟಗಾರರಿಗೆ ‘ಮಂಕುತಿಮ್ಮನ ಕಗ್ಗ’ ಕೊಡುಗೆಯಾಗಿ ನೀಡಿದ ಕಿಚ್ಚ

ಕನ್ನಡ ಪರ ಹೋರಾಟಗಾರರಿಗೆ ‘ಮಂಕುತಿಮ್ಮನ ಕಗ್ಗ’ ಕೊಡುಗೆಯಾಗಿ ನೀಡಿದ ಕಿಚ್ಚ

ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ಸುದೀಪ್ ‘ಮಂಕುತಿಮ್ಮನ ಕಗ್ಗ’ ಮತ್ತು ‘ಪ್ರೀತಿಯಿಂದ ಕಿಚ್ಚ ಸುದೀಪ್’ ಎಂದು ಪ್ರಿಂಟ್ ಆಗಿರುವ ಲೇಖನಿಯನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.

ಸುದೀಪ್ ಅವರ ಈ ಸಂಸ್ಕಾರ-ಅಭಿರುಚಿಗೆ ಕಂಡು ಕನ್ನಡ ಪರ ಹೋರಾಟಗಾರರು ಶರಣಾಗಿದ್ದಾರೆ. ಡಬ್ಬಿಂಗ್ ಪರ ನಿಂತಿದ್ದಕ್ಕಾಗಿ ಕಿಚ್ಚ ಸುದೀಪ್ ರವರನ್ನು ಅಭಿನಂದಿಸಲು ಹೋದ ಕನ್ನಡ ಸಂಘಟನೆಗಳ ಪ್ರಮುಖರಿಗೆ ಕಿಚ್ಚರವರು ಬರೀ ಫೋಟೋಗೆ ಪೋಸ್ ಕೊಟ್ಟು ಕಳಿಸ್ಲಿಲ್ಲ.

ಮಂಕುತಿಮ್ಮನ ಕಗ್ಗ ಮತ್ತು ಸುಂದರವಾದ ಲೇಖನಿಯನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದ್ದಾರೆ. ಅವರ ಸಂಸ್ಕಾರ – ಅಭಿರುಚಿಗೆ ಶರಣು. ಸಂಸ್ಕಾರ ಅಂದ್ರೆ ಇದೇ ಅಲ್ವ ಎಂದು ಕನ್ನಡ ಪರ ಹೋರಾಟಗಾರರು ಟ್ವೀಟ್ ಮಾಡಿದ್ದಾರೆ.